ಕಾನನ – ಆಗಸ್ಟ್ – 2026
ಕಾನನ ಆಗಸ್ಟ್2026 ಸಂಚಿಕೆಯಲ್ಲಿರುವ ವಿಷಯಗಳು:
ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ.
ಲೇಖನಗಳು:
ತಾಯಿಯೇ ಅತ್ಯುತ್ತಮ ಶಿಕ್ಷಕಿ – ಭದ್ರಾ ಜಲಾಶಯದ ಬಳಿ ಒಂದು ವರ್ಷದ ಕಾಲ ನಡೆದ ತಾಯಿ ಚಿರತೆ ಮತ್ತು ಮೂರು ಮರಿಗಳ (ಒಂದು ಮೆಲನಿಸ್ಟಿಕ್ ಕಪ್ಪು ಮರಿ ಸೇರಿ) ಅಪರೂಪದ ವನ್ಯಜೀವಿ ವೀಕ್ಷಣೆ.
ಲೇಖಕರು: ಗೋಪಾಲಕೃಷ್ಣ ಸಿ.
ರೈತನ ಪ್ರಶ್ನೆಗಳು, ಸಮುದ್ರದ ಉತ್ತರ – ಸಾವಿರಾರು ಕಿ.ಮೀ ದೂರದ ಪೆಸಿಫಿಕ್ ಸಾಗರದ ಉಷ್ಣತೆ ಎಲ್ ನಿನೋ-ಲಾ ನಿನಾ ಮೂಲಕ ಕರ್ನಾಟಕದ ಮುಂಗಾರು ಮತ್ತು ಕೃಷಿಯ ಮೇಲೆ ಬೀರುವ ಪರಿಣಾಮದ ಸರಳ ವಿವರಣೆ.
ಲೇಖಕರು: ಯೋಗಾನಂದ್ ಚಂದ್ರಯ್ಯ
ಹುಲಿ-ಜೀರುಂಡೆಗಳ ವಿಸ್ಮಯ ಲೋಕ – 2 (ಕೀಟ ಪ್ರಪಂಚ) – ಹುಲಿ ಜೀರುಂಡೆ ಮರಿಗಳ ವಿಚಿತ್ರ ರೂಪ, ಬಿಲದ ಬೇಟೆ ತಂತ್ರ ಮತ್ತು ಪರಾವಲಂಬಿ ಕಣಜ, ನೊಣಗಳ ವಿರುದ್ಧದ ಬದುಕುಳಿಯುವ ಹೋರಾಟ.
ಲೇಖಕರು: ಹರೀಶ ಎ. ಎಸ್.
ಓ ನೇರಳೆ… ನೀ ಯಾರೆಂದು ಹೇಳಲೇ! (ವನಸುಮ) – ನೇರಳೆ ಮರದ ಸಸ್ಯಶಾಸ್ತ್ರ, ಬಾಲ್ಯದ ನೆನಪುಗಳು ಮತ್ತು ಅದರ ಔಷಧೀಯ ಗುಣಗಳ ಪರಿಚಯ.
ಲೇಖಕರು: ಹರ್ಷಿತ ಪಿ. ಹನುಮಯ್ಯ
ಬ್ಯಾಕ್ಟೀರಿಯಾದಿಂದ ಚಾಕೊಲೇಟ್ ಸ್ವಾದ! (ವಿವಿ ಅಂಕಣ) – ಚಾಕೊಲೇಟಿನ ನಿಜವಾದ ಸ್ವಾದ ಕೊಕೊವಾ ಗಿಡದಿಂದಲ್ಲ, ಹುದುಗುವಿಕೆಯಲ್ಲಿ ಪಾತ್ರವಹಿಸುವ ಬ್ಯಾಕ್ಟೀರಿಯಾ-ಯೀಸ್ಟ್‌ಗಳಿಂದ ಬರುತ್ತದೆ ಎಂಬ ಹೊಸ ಸಂಶೋಧನೆಯ ಕುತೂಹಲಕಾರಿ ಪರಿಚಯ.
ಲೇಖಕರು: ಜೈಕುಮಾರ್ ಆರ್.
ನಮ್ಮ ನಾಡ ಶ್ರೀಗಂಧ (ಕವನ) – ಕಾಡು ನಾಶ, ಹಸಿರು ಸಂರಕ್ಷಣೆ ಮತ್ತು ಕಾಡು-ನಾಡಿನ ಸಮತೋಲನದ ಸಂದೇಶ ಸಾರುವ ಕವನ.
ಲೇಖಕರು: ನಾಗರಾಜ್ ಜಿ.ಎನ್. ಬಾಡ
ಪ್ರಕೃತಿ ಬಿಂಬ – ಕಂದು ಹೂ, ನವಿಲು ಹೂ, ನೀಲಿ ಹೂ ಮತ್ತು ಬಿಳಿಯ ಚಿಟ್ಟೆಗಳ ಸಂಪೂರ್ಣ ಮಾಹಿತಿ.
ಚಿತ್ರ: ಡಾ. ಅಮೋಲ್ | ಲೇಖನ: ದೀಪ್ತಿ ಎನ್.
ವನಬಂಧ – 15 – ಕಾಡು, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕನ್ನಡ ಪದಬಂಧ ಆಟ.
ಲೇಖಕರು: ಸುಬ್ಬು ಬಾದಲ್
ಕಾನನ ಮಾಸಿಕ ಪತ್ರಿಕೆ 2011 ರಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.
ಪ್ರಕೃತಿ ಪ್ರೇಮಿಗಳಿಗಾಗಿ ಉಚಿತ ಡೌನ್‌ಲೋಡ್ ಲಭ್ಯ!
ಕಾನನ ಆಗಸ್ಟ್ 2026 ಸಂಚಿಕೆಯ PDF ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.



