ವನಬಂಧ-15
ಎಡದಿಂದ ಬಲಕ್ಕೆ:
- ಈ ಪಕ್ಷಿಗೆ ಕೈ ಕೆರೆತದ ಬಾಧೆ (3)
2. ನದಿ ದಾಟಿಸುವ ಈ ವಾಹನ ಉಲ್ಟಾ ಆಗಿ ಬಾಯಿಮುಚ್ಚಿ ಸುಮ್ಮನಿರಲು ಸೂಚಿಸುತ್ತದೆ (2)
3. ಕಾಯುವವರು ನೀಡುವ ಸೇವೆ (3)
4.ದಾಸರ ಮಗಳ ಮದುವೆಗೆ ಬಂದ ಹಕ್ಕಿ (5)
5. ಮೀನು ಹಿಡಿಯುವವನು (4)
6. ಗಿಜಿ ಗಿಜಿ ಅಂತ ಕೂಗದಿದ್ದರೂ ಚಂದದ ರೂಪದ ಪಕ್ಷಿ (5)
7. ತಾಮ್ರ ಕುಟ್ಟುವ ಹಕ್ಕಿಯೊಂದು ಇಲ್ಲಿ ಹಿಂದು ಮುಂದಾಗಿ ಕುಳಿತಿದೆ. (5)
8. ಚೇಳು ಕಡಿದವರಂತೆ ಆಡುತ್ತಿದೆ ಈ ಹಕ್ಕಿ (3)
ಮೇಲಿನಿಂದ ಕೆಳಕ್ಕೆ:
- ಸಾಮಾನ್ಯವಾಗಿ ಬೆಟ್ಟದ ಬುಡದ ಪ್ರದೇಶಗಳಿಗೆ ಹೀಗೆ ಕರೆಯುವುದು ವಾಡಿಕೆ (3)
3. ಕಾಡಿನಲ್ಲಿ ಹುಟ್ಟಿದ ಹೂವು (4)
4. ಈ ಹಕ್ಕಿಗೂ ಗಣಿಗಾರಿಕೆಗೂ ಸಂಬಂಧವಿಲ್ಲ ಬಿಡಿ (5)
6. ಗಿಡವನ್ನು ಬಿಡದೇ ಹಿಡಿದಿರುವ ಖಗ (3)
7. ಹೂವಿನ ಪರಿಮಳ ಹಾಗೂ ಸುವಾಸನೆಯೊಂದಿಗೆ ಜೊತೆಯಾಗುವ ಪದ (2)
8. ಬಾಲದ ತುದಿಯಲ್ಲಿ ವಿಷದ ಕೊಂಡಿಯಿರುವ ಎರಡಕ್ಷರದ ಈ ಸಂಧಿಪದಿ ಕುಟುಕಿದರೆ ಬಲು ಗೋಳು (2)
9.ಪಿಳಿಪಿಳಿ ನೋಡುವ ಪುಟ್ಟ ಪಕ್ಷಿ (4)
10. ಎಲ್ಲಾ ದೇಶಗಳಿಗೆ ಇರಬೇಕಾದ ಬೇಲಿ ಇಲ್ಲಿ ತಲೆಕೆಳಗಾಗಿದೆ (2)
ವನಬಂಧ – 14(ಜುಲೈ – 2026)ರ ಉತ್ತರಗಳು
ಎಡದಿಂದ ಬಲಕ್ಕೆ
1. ಮಳೆಕಾಡು 2. ಕೋತಿ 3. ಜೇನ್ನೊಣ 4. ಶರಾವತಿ 5. ನಭ 6. ಗುರಿ 7. ಕೆರೆಕುಂಟೆ 8. ಬೂದುಗುಂಬಳ 9. ಒಂದೆಲಗ
ಮೇಲಿನಿಂದ ಕೆಳಕ್ಕೆ
1. ಮರಳು 2. ಕಾಡುಕೋಣ 3. ಕವಲುತೋಕೆ 4. ಶರಭ 5. ನರಿ 7. ದುಬಾರೆ 9. ಒಂಟೆ 8. ಮೆದೆ
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

– ಸುಬ್ಬು ಬಾದಲ್
ಬೆಂಗಳೂರು ಜಿಲ್ಲೆ



