ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನಮ್ಮ ನಾಡ ಶ್ರೀಗಂಧ

© ಅರವಿಂದ ರಂಗನಾಥ್

ಗಿಡ ಮರಗಳ ನಡುವೆ ಇರುವ
ಹಸಿರ ಕಾನನವ ನಾವು ಪ್ರೀತಿಸುತ್ತೇವೆ
ಗಿಡಗಳನ್ನು ನೆಟ್ಟು ಮಾಡುತ್ತ
ಹಸಿರನ್ನು ಬೆಳೆಸಬೇಕು ಸುಮಾರು

ಕಟ್ಟುತ್ತಾ ಕಟ್ಟುತ್ತಾ ಕಾಡು
ಬರಿದಾಗುತ್ತಿದೆ ಸುಂದರ ಗಿಡಗಳ ನಾಡು
ಕಾಣುತ್ತಿಲ್ಲ ಹಕ್ಕಿಯ ಚಿಲಿಪಿಲಿ ಗೂಡು
ಬಿಸಿಲಿಗೆ ಸುಡುತ್ತಿದೆ ಬೀಡು

ಗಿಡ ಮರಗಳ ಜೊತೆಗೆ ಮಾತನಾಡು
ಕೇಳಿ ನಲಿದಾಡು ಹಕ್ಕಿಗಳ ಇಂಪಾದ ಹಾಡು
ಸದಾ ನೆರಳ ನೀಡುವುದು ಹಸಿರ ಕಾಡು
ಆದರೂ ಅರಿಯದೆ ಹೋಗುವೆವು ನೋಡು

ಕಾಡು ಇಲ್ಲದೆ ಹೋದರೆ ಎಷ್ಟೊಂದು ಕಷ್ಟ
ಮಳೆ ಬರದೆ ಬರಗಾಲ ತರುವುದು ನಷ್ಟ
ಬರಿದಾಗಿ ಹೋಗುವುದು ನಮ್ಮ ಅದೃಷ್ಟ
ಗಿಡ ಮರವ ಬೆಳೆಸುವ ಕಾಯಕವೇ ಶ್ರೇಷ್ಠ

ನಾಗರಾಜ್ ಜಿ. ಎನ್.  ಬಾಡ
        ಉತ್ತರ ಕನ್ನಡ ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.