ಕಾನನ

ನಿಸರ್ಗದೆಡೆಗೆ ಪಯಣ

ಹೊಸ ಉಸಿರು

©ಅರವಿಂದ್ ರಂಗನಾಥ್

ಅತ್ತ ಇತ್ತ ನಮ್ಮ ಸುತ್ತಮುತ್ತ
ಎತ್ತ ನೋಡಿದರೂ ಹಸಿ ಹಸಿರು
ಏದುಸಿರು ಬಿಡುವ ಪ್ರತಿ ಜೀವಕ್ಕೆ
ತುಂಬುವುದು ಹೊಸ ಉಸಿರು

ದೂರದಿಂದ ಬಿಸಿಲಿನಲ್ಲಿ ದಣಿದು ಬಂದ
ಎಲ್ಲ ಜೀವಿಗಳಿಗೂ ನೀಡುವುದು ನೆರಳು
ಹಕ್ಕಿಗಳ ಕುಹೂ ಕುಹೂ ಚಿಲಿಪಿಲಿ ನಾದ
ಮುದದಿ ಮಾಡುತ್ತಿದೆ ಮನಸಿಗೆ ಮರುಳು

ಹಸಿದು ಬಂದ ಪ್ರತಿ ಜೀವದೊಡಲ
ತುಂಬುತ್ತಿದೆ ಹಲವು ಬಗೆಯ ಹಣ್ಣು
ನೆರಳು ಮತ್ತು ಹಣ್ಣುಕೊಟ್ಟ ಮರವ ಕಡಿದು
ಮನುಜ ಮಾಡುವನು ಎಲ್ಲವನ್ನೂ ಮಣ್ಣು

ಕಾಡು ಮೇಡು ಜೀವ ಜಲದ ಮೇಲೆ
ಸದಾ ದ್ರೋಹಿ ಮನುಜನ ಕಣ್ಣು
ಸ್ವರ‍್ಥ ಸಾಧನೆಯಲ್ಲಿ ಮುಳುಗಿ
ಸುತ್ತಮುತ್ತಲ ಪರಿಸರಕ್ಕೆ ಆಗಿರುವನು ಹುಣ್ಣು

ಹೆಣ್ಣು ಹೊನ್ನು ಸುತ್ತಲಿನ ಪರಿಸರ ರಕ್ಷಣೆಗೆ
ಕಂಕಣ ಬದ್ಧರಾಗಿ ದುಡಿಯಬೇಕು ನಾವು
ಪರಿಸರವನ್ನು ನಾಶ ಮಾಡುತ್ತಾ ಹೋದರೆ
ಉಳಿಯುವುದು ನಮ್ಮ ಬಾಳಲ್ಲಿ ಬರೀ ನೋವು

ನಾಗರಾಜ ಜಿ. ಎನ್. ಬಾಡ
        ಉತ್ತರ ಕನ್ನಡ ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.