ನೀವೂ ಕಾನನಕ್ಕೆ ಬರೆಯಬಹುದು
© ಮಂಜುನಾಥ್ ಅಮಲಗೊಂದಿ
ಭೂಮಿಯನ್ನು ಸೂರ್ಯನ ಹಾನಿಕಾರಕ ಅತಿನೇರಳೆ (UV) ಕಿರಣಗಳಿಂದ ರಕ್ಷಿಸುವ ನೈಸರ್ಗಿಕ ಕವಚವೇ ಓಜೋನ್ ಪದರ. 1987ರ ಮಾಂಟ್ರಿಯಲ್ ಪ್ರೋಟೋಕಾಲ್ (Montreal Protocol) ಒಪ್ಪಂದದ ನಂತರ ಓಜೋನ್ ಹಾನಿಗೆ ಕಾರಣವಾಗುವ ಸುಮಾರು 99% ರಾಸಾಯನಿಕಗಳ ಬಳಕೆಯನ್ನು ಜಾಗತಿಕವಾಗಿ ಹಂತಹಂತವಾಗಿ ನಿಲ್ಲಿಸಲಾಗಿದೆ. ಇದರ ಪರಿಣಾಮವಾಗಿ ಓಜೋನ್ ಪದರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಿಶ್ವದ ಬಹುತೇಕ ಭಾಗಗಳಲ್ಲಿ 2040ರ ವೇಳೆಗೆ ಮತ್ತು ಅಂಟಾರ್ಟಿಕಾದ ಮೇಲೆ ಸುಮಾರು 2066ರ ವೇಳೆಗೆ 1980ರ ಮಟ್ಟಕ್ಕೆ ಮರಳುವ ನಿರೀಕ್ಷೆಯಿದೆ.
ಪರಿಸರ ಸಮಸ್ಯೆಗಳನ್ನು ಅರಿತುಕೊಳ್ಳುವುದು, ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಪ್ರಕೃತಿಯೊಂದಿಗೆ ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಇಂದಿನ ಅಗತ್ಯವಾಗಿದೆ.
ಪ್ರಕೃತಿಯ ಪ್ರತಿಯೊಂದು ಜೀವಿ, ಮರ, ಕಾಡು, ನದಿ ಹಾಗೂ ಪರಿಸರ ವ್ಯವಸ್ಥೆಯು ಒಂದು ಕಥೆಯನ್ನು ಹೇಳುತ್ತದೆ. ಆ ಕಥೆಗಳನ್ನು ದಾಖಲಿಸುವುದು, ಹಂಚಿಕೊಳ್ಳುವುದು ಮತ್ತು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾನನ ಪ್ರಕೃತಿ ಅವಲೋಕನಗಳು, ವನ್ಯಜೀವಿ ಅನುಭವಗಳು, ಪರಿಸರ ಸಂರಕ್ಷಣೆ, ಜೀವವೈವಿಧ್ಯ, ವಿದ್ಯಾರ್ಥಿಗಳಿಗೆ ವಿಜ್ಞಾನ ಚಟುವಟಿಕೆಗಳು, ಪ್ರಕೃತಿ ಛಾಯಾಗ್ರಹಣ, ಪ್ರವಾಸ ಅನುಭವಗಳು ಹಾಗೂ ಪರಿಸರ ಜಾಗೃತಿಗೆ ಸಂಬಂಧಿಸಿದ ಲೇಖನಗಳನ್ನು ಸ್ವಾಗತಿಸುತ್ತದೆ. ನಿಮ್ಮ ಅನುಭವಗಳು, ಅಧ್ಯಯನಗಳು ಮತ್ತು ಪ್ರಕೃತಿಯೊಂದಿಗಿನ ಒಡನಾಟವನ್ನು ಬರಹ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಲೇಖನವು ಮತ್ತೊಬ್ಬರಲ್ಲಿ ಪ್ರಕೃತಿಯ ಬಗ್ಗೆ ಕುತೂಹಲ, ಅರಿವು ಮತ್ತು ಕಾಳಜಿಯನ್ನು ಮೂಡಿಸಬಹುದು.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.



