ನಮ್ಮ ಬರಹಗಾರರು

5 posts
ನಾನು ಒಬ್ಬ ಪಕ್ಷಿ ಪ್ರೇಮಿ ಮತ್ತು ಅದರ ಛಾಯಾಗ್ರಾಹಕಿ, ಇತರ ವನ್ಯ ಜೀವಿಗಳ ಛಾಯಾಗ್ರಹಣದಲ್ಲಿ ಆಸಕ್ತಿ ತುಂಬಾ ಇದೆ. ನಾನು ನನ್ನ ತಂದೆ ಸ್ಥಾಪಿಸಿದ ಒಂದು ಸಣ್ಣ ಕೈಗಾರಿಕೋದ್ಯಮದಲ್ಲಿ ನನ್ನ ಸೇವೆ ಮತ್ತು ಅದರ ಉನ್ನತಿ ನನ್ನ ಕೆಲಸ. ನನ್ನ ಮೇಲಿನ ಜವಾಬ್ದಾರಿ ಒಬ್ಬ ಮಗಳದಾಗಿ, ಒಬ್ಬ ಪತ್ನಿಯಾಗಿ, ಒಬ್ಬ ಮಗಳ ತಾಯಿಯಾಗಿ, ಒಬ್ಬ ಅತ್ತೆಯ ಸೊಸೆಯಾಗಿ ಇರುತ್ತದೆ. ನಾನು ನನ್ನ ಬಿಡುವಿನ ಸಮಯದಲ್ಲಿ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡೆ ಮತ್ತು ಇದು ನನ್ನ ಮನಸ್ಸಿಗೆ ತುಂಬಾ ಅಚ್ಚುಮೆಚ್ಚು. ಹಾಗೊಮ್ಮೆ ಹೀಗೊಮ್ಮೆ ಚಾರಣ ದಲ್ಲಿಯೂ ನನ್ನ ಆಸಕ್ತಿ , ಅದಕ್ಕೆ ನನ್ನ ಮಗಳ ಕಂಪನಿ ಇರುತ್ತದೆ... ನನಗೆ ಶಾಸ್ತ್ರೀಯ ನೃತ್ಯ, ಸಂಗೀತದ ಅಭ್ಯಾಸವನ್ನು ಮಾಡಿದ್ದೇನೆ. ಸಮರ ಕಲೆಯನ್ನು ಅಭ್ಯಾಸ ಮಾಡಿದವಳು. ಹೀಗೆ ನನ್ನನ್ನು ನಾನು ಯಾವಾಗಲೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನನಗೆ ಇಷ್ಟ. ಸಾಮಾಜಿಕ ವಾಗಿಯೂ ಸಕ್ರಿಯವಾಗಿದ್ದೆನೆ. ಹೀಗಿದೆ ನನ್ನ ಇದುವರೆಗಿನ ಜೀವನ, ಮಂದಿನ ಜೀವನ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಸರ, ವನ್ಯಜೀವಿಗಳ ಸಂರಕ್ಷಣೆಗಾಗಿ ನನ್ನ ಸೇವೆ ಮೀಸಲು.
View Posts →
6 posts
M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ. ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು. ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .
View Posts →
18 posts
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ
View Posts →
9 posts
ಪ್ರಾಧ್ಯಾಪಕರು ಸೂಕ್ಷ್ಮಜೀವಿಶಾಸ್ತ್ರ ವಿಭಾಗ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ, ದಾವಣಗೆರೆ
View Posts →
6 posts
ಹಯಾತ್ ಮೊಹಮ್ಮದ್ ರವರು ಒಬ್ಬ ಐಟಿ ಉದ್ಯೋಗಿ . ಪ್ರಕೃತಿಯ ನಡುವೆ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಾ, ಪ್ರಕೃತಿಯನ್ನೇ ತಮ್ಮ ವಿವೇಕವನ್ನು ವೃದ್ಧಿಸಿಕೊಳ್ಳುವ ಸಾಧನವನ್ನಾಗಿಸಿಕೊಂಡಿದ್ದಾರೆ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಳೆಯುತ್ತಿರುವ ಈ ಮಹಾನಗರಿಯ ಉದ್ಯಾನಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಕಾಣಸಿಕ್ಕ ಚಿಟ್ಟೆಗಳು ಮತ್ತು ಕೀಟಗಳು ಇವರ ಆಸಕ್ತಿಯನ್ನು ಕೆರಳಿಸಿದವು. ಇವರು ಮ್ಯಾಕ್ರೋ ಫೋಟೋಗ್ರಫಿ ವಿಧಾನವನ್ನ ಬಳಸಿ ಕೀಟ ಲೋಕದ ವಿಸ್ಮಯಗಳನ್ನು ಸೆರೆಹಿಡಿದು ಮಾನವ ಜಗತ್ತಿಗೆ ತೋರಿಸುತ್ತಿದ್ದಾರೆ.
View Posts →
81 posts
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.
View Posts →
2 posts
ತುಮಕೂರಿನ ಚಿಕ್ಕನಾಯಕನಹಳ್ಳಿಯ ಬಸವಾಪಟ್ಟಣ ನನ್ನೂರು. ತಂದೆ ಮೂಡಲಗಿರಿಯಪ್ಪ, ತಾಯಿ ನೇತ್ರಾವತಿ ಜೊತೆಗೆ ನನ್ನ ಬಾಲ್ಯವನ್ನು ಚೆಂದಗಾಣಿಸಿದ ಸಹೋದರಿಯರಿಬ್ಬರು. ಅಕ್ಕ ರೋಹಿಣಿ, ತಂಗಿ ಅನುಪಮ. ಇದಿಷ್ಟು ನನ್ನ ಪರಿವಾರ. ಇತ್ತೀಚೆಗೆ ಅದು ವಿಸ್ತರಿಸಿದೆ.         ಓದಿದ್ದು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ. ಆದರೂ ನನ್ನ ಮನ ಸೆಳೆದದ್ದು ಮಾತ್ರ ನನ್ನ ಹುಟ್ಟೂರಿಗೆ. ಮಳೆಗಾಲದಲ್ಲಿ ಕೊಡೆ ಹಿಡಿದು ನಡೆಯುವುದು, ಇಷ್ಟದ ಹಾಡನ್ನು ಗುನುಗುನಿಸುವುದು, ಮಕ್ಕಳ ಸೈನ್ಯದ ಜೊತೆಗೆ ತೋಟವನ್ನೆಲ್ಲ ಸುತ್ತಿ ಬಂದು ಅಮ್ಮನ ಕೈಯಲ್ಲಿ ಬೈಗುಳ ಕೇಳುವುದು ನನ್ನಿಷ್ಟದ ಹವ್ಯಾಸಗಳು. ಜೊತೆಗೆ ಒಂದಷ್ಟು ಓದುವ, ಮನಸಿಗೆ ತೋಚಿದ್ದನ್ನ ಗೀಚುವ ಗೀಳೂ ಇದೆ ಅನ್ನಿ. ಆಗಾಗ ಸಣ್ಣ ನಾಟಕ ಬರೆದು ನಿರ್ದೇಶನವನ್ನೂ ಮಾಡಿದ್ದಿದೆ.            ಪ್ರಸ್ತುತ ಶ್ರೀ ಸಾರದಾದೇವಿ ವಿದ್ಯಾಕೇಂದ್ರ ಶಿವನಹಳ್ಳಿ, ಬೆಂಗಳೂರು ಇಲ್ಲಿ ಪ್ರೌಢಶಾಲಾ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.  ಇಷ್ಟರಲ್ಲಿ ಅಜಯ್ ಕುಮಾರ್ ಅನ್ನುವವರೊಂದಿಗೆ ನನ್ನ ಮದುವೆಯೂ ಆಯಿತು. ಇದೀಗ ಮುಖ್ಯ ವಿಷಯಕ್ಕೆ ಬರುತ್ತೇನೆ. ನನಗೆ ಬರೆಯುವ ಗೀಳು ಅದೇಗೆ ಬಂತೋ ಗೊತ್ತಿಲ್ಲ. ಆದರೆ ನಾನು ಪ್ರೌಢಶಾಲೆಯಲ್ಲಿದ್ದಾಗ, ನನ್ನ ವಿಜ್ಞಾನ ಶಿಕ್ಷಕಿ ಪಿ. ವಿ ಲಲಿತಾರ  ಒತ್ತಾಯಕ್ಕೆ ಬರೆದ ಪದ್ಯ ಜಿಲ್ಲಾಮಟ್ಟದಲ್ಲಿ ಸದ್ದು ಮಾಡಿದ್ದು ನಾನೊಬ್ಬಳು ಹವ್ಯಾಸೀ ಬರಹಗಾರಳನ್ನಾಗಿ ಮಾಡಿತೇ? ಗೊತ್ತಿಲ್ಲ. ಆದರೆ ನನ್ನೊಳಗಿನ ಅದೆಷ್ಟೋ ವಿಚಾರಗಳಿಗೆ ಅಕ್ಷರರೂಪ ಕೊಟ್ಟದ್ದಕ್ಕೆ ಮಾತ್ರ ನಿಮ್ಮ ಮುಂದೆ ಹೀಗೆ ನಿಂತಿದ್ದೇನೆ ಅನ್ನುವುದು ಮಾತ್ರ ಸತ್ಯ. ಅದಕ್ಕೆ ಸ್ಫೂರ್ತಿ ಕೊಟ್ಟ ಅದೆಷ್ಟೋ ಹಿರಿಯ ಶಿಕ್ಷಕರು, ಅದರಲ್ಲೂ ನನ್ನದೇ ಆದ ಬರವಣಿಗೆ ಶೈಲಿ ರೂಪಿಸಿಕೊಳ್ಳುವಲ್ಲಿ ಬೆಂಬಲವಾಗಿದ್ದ ಕುಮಾರಸ್ವಾಮಿ ಸರ್ ಅವರನ್ನು ನೆನಪಿಸಿಕೊಳ್ಳಲೇಬೇಕು.
View Posts →
8 posts
ಹವ್ಯಾಸಿ ಕವಿ, ಪರಿಸರ ಕಾಳಜಿಯ ಜೊತೆಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೊಂದಿರುತ್ತೇನೆ. ವೃತ್ತಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗ. ಪದವಿ - B.Sc
View Posts →
4 posts
ಬೋಧನೆಯ ಜೊತೆ ಬರಹಗಾರನಾಗುವ ಹಂಬಲ..ಸಾಮಾಜಿಕ ಕಾಳಜಿಯ ಜೊತೆ ಸಾಧಕನಾಗುವ ಹಂಬಲ..ಪ್ರಕೃತಿಯ ಮಡಿಲಲ್ಲಿ ಕಳೆದುಹೋಗುವ ಹಂಬಲ.. ತಾಂತ್ರಿಕ ಕಾಲೇಜಿನ ಉಪನ್ಯಾಸಕನಾಗಿರುವ ನನಗೆ ಕನ್ನಡ ಬರವಣಿಗೆ ಮೋಹ ಹೊಸತೇನಲ್ಲ..ಹವ್ಯಾಸಿ ಬರಹಗಾರ..ವೃತ್ತಿಯಲ್ಲಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಸಂಶೋಧಕ
View Posts →
9 posts
ಪ್ರಸ್ತುತ ಜಂಗಲ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ನಲ್ಲಿ ನ್ಯಾಚುರಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಾಡು ಮೇಡು ಸುತ್ತೋ ಹುಚ್ಚು. ಕಾಡಿನ ಅನುಭವವನ್ನ ಅಕ್ಷರಕ್ಕಿಳಿಸುವ ಗೀಳು ತೇಜಸ್ವಿ ರವರ ಲೇಖನಗಳಿಂದ ಬಂದಿದ್ದು. ಪರಿಸರ ಸಂರಕ್ಷಣೆ ಹಾಗೂ ಪರಿಸರ ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ.
View Posts →
6 posts
ಪರಿಸರ ಸಮಾಜಕಾರ್ಯಕರ್ತರು. ಪರಿಸರ, ವನ್ಯಜೀವಿ ಮತ್ತು ಸುಸ್ಥಿರ ಕೃಷಿಯ ಬಗ್ಗೆ ಬರೆಯುವ ಲೇಖಕರು. ಅಧ್ಯಕ್ಷರು, ಚಿಗುರು ಯುವಜನ ಸಂಘ, ಅಮಲಗೊಂದಿ, ಸಿರಾ ತಾ.
View Posts →
9 posts
ವೃತ್ತಿಯಲ್ಲಿ ಗಣಿತ ಶಿಕ್ಷಕ ನಾನು ಹುಟ್ಟಿ ಬೆಳೆದದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಧ್ಯ ಇರುವ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಊರಿನ ಸುತ್ತ ಕಾಡಿರುವ ಕಾರಣವೋ ಏನೋ ಚಿಕ್ಕಂದಿನಿಂದಲೂ ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ . ನನ್ನೀ ಆಸಕ್ತಿಗೆ ಪುಷ್ಠಿ ನೀಡಿದ್ದು ಹಾಗೂ ಪರಿಸರದ ಬಗ್ಗೆ ನನಗೆ ತಿಳಿದದ್ದನ್ನು ಸುತ್ತಲಿನ ಹಳ್ಳಿ ಮಕ್ಕಳಿಗೆ ತಿಳಿಸಿಕೊಡಲು ಅವಕಾಶ ಕಲ್ಪಿಸಿಕೊಟ್ಟಿದ್ದು WCG. ಕನ್ನಡ ಸಾಹಿತ್ಯಕ್ಕೆ ನನ್ನನ್ನು ಎಳೆತಂದದ್ದು ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರ ಪುಸ್ತಕಗಳು. ಇವರ ಪುಸ್ತಕಗಳಿಂದ ಪ್ರಭಾವಿತನಾಗಿ ಕನ್ನಡ ಸಾಹಿತ್ಯದ ಕೆಲವು ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಓದಿದ ಮೇಲೆ ಕನ್ನಡ ಭಾಷೆಗೆ ಕನ್ನಡ ನಾಡಿಗೆ ನನ್ನ ಕೈಲಾದಷ್ಟು ಸೇವೆ ಮಾಡಬೇಕೆಂಬುದು ಮನಸ್ಸಿನಲ್ಲಿ ನೆಲೆಯೂರಿತು. ಈ ಕನಸು ನನಸಾಗಲು ಅವಕಾಶ ಕಲ್ಪಿಸಿಕೊಟ್ಟಿದ್ದು ಕಾನನ ಇ-ಮಾಸ ಪತ್ರಿಕೆ. ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಚಾರಣ , ಪುಸ್ತಕ ಓದುವುದು ನನ್ನ ಕೆಲವು ಹವ್ಯಾಸಗಳು.
View Posts →
5 posts
ಮೂಲತಃ ಕುರುಚಲು ಕಾಡು ಪ್ರದೇಶದಲ್ಲಿ ರಾಮನಗರ ಹುಟ್ಟಿ ಬೆಳೆದ ನನಗೆ ಕಾಡು ಒಂದು ಆಸಕ್ತಿಯ ವಿಷಯವಾಯಿತು.ಅದರಂತಯೇ ಅರಣ್ಯ ಇಲಾಖೆಯ ಸೇವೆಗೂ ಸೇರಿದ ಮೇಲೆ ಇನ್ನೂ ಹೆಚ್ಚಿನ ಆಸಕ್ತಿ ಬೆಳೆಯಿತು‌.ಪಶ್ಚಿಮ ಘಟ್ಟಗಳ ಕಾಡಿನ ಪಯಣ ಒಂದೊಂದು ಘಟನೆ ಮತ್ತು ಕಾಡಿನ‌ ವಿಸ್ಮಯ ನೋಡುತ್ತ ಕಂಡಿದ್ದು ಪಟ ತೆಗೆಯುತ್ತಾ ನಡೆದ ತಿಳಿದ ಘಟನೆಗಳನ್ನು ಬರೆಯುತ್ತಾ.ನನ್ನಲ್ಲಿ ಇದೆಲ್ಲಾ ಹವ್ಯಾಸವಾಗದೇ ನಿತ್ಯದ ಕರ್ತವ್ಯದ ಜೊತೆಲೀ ಸುಮಗವಾಗಿ ಸಾಗುತ್ತಲೇ ಇದೆ.
View Posts →
6 posts
ಅರಣ್ಯಶಾಸ್ತೃ (ಬಿ. ಎಸ್.ಸಿ. ಫೋರೆಸ್ಟ್ರೀ) ವಿದ್ಯಾರ್ಥಿನಿಯಾಗಿದ್ದು, ಪರಿಸರದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.
View Posts →
7 posts
ಉದ್ಯೋಗ: ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು. ಹವ್ಯಾಸಗಳು: ಚಾರಣ, ಬರವಣಿಗೆ, ಗಾರ್ಡನಿಂಗ್, ಹಾಡು ಮತ್ತು ಚಿತ್ರಕಲೆ, ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ. ಬರಹಗಳು: ರಾಜ್ಯಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಬರವಣಿಗೆಗಳು ಪ್ರಕಟಗೊಂಡಿವೆ. ಪ್ರಕಟಣೆಗಳು: ಪರ್ಯಟನೆ. ದಿಕ್ಸೂಚಿ ಮತ್ತು ಪರಿಭ್ರಮಣ ಪುಸ್ತಕಗಳ ಪ್ರಕಟಣೆ, ಪರಿವರ್ತನಾ ಎಂಬ ಸ್ವಂತ ಜಾಲತಾಣಪುಟದಲ್ಲಿ 350ಕ್ಕೂ ಮಿಕ್ಕಿದ ಸಂಚಿಕೆಗಳ ಪ್ರಕಟಣೆ.
View Posts →
10 posts
ಸಹಾಯಕ ಪ್ರಾಧ್ಯಾಪಕರು ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.
View Posts →
24 posts
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು. ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.
View Posts →
6 posts
ಮೂಲತಃ ಮಲೆನಾಡಿನವಳಾದ ನಾನು, ವೃತ್ತಿಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಸಂಶೋಧಕಿ. ಭೌತಶಾಸ್ತ್ರದ ಕೋನದಿಂದ ಪ್ರಕೃತಿಯನ್ನು ಅರಿಯುವುದು ಒಂದೆಡೆಯಾದರೆ, ಇನ್ನೊಂದೆಡೆ ಸೃಷ್ಟಿಯ ಜೀವ ವೈವಿಧ್ಯತೆಯ ಅನಂತತೆಯನ್ನು, ಅದರಲ್ಲಿ ಕಂಡುಕೊಂಡ ತನ್ಮಯತೆಯನ್ನು ಅಭಿವ್ಯಕ್ತಪಡಿಸುವ ಬಯಕೆ ನನ್ನದು. ಅದನ್ನು ಬರಹದ, ಹಾಗೇ ಸೆರೆಹಿಡಿದ ಛಾಯಾಚಿತ್ರಗಳ ಮೂಲಕ ಇತರರನ್ನೂ ತಲುಪುವ ಸಣ್ಣ ಹಂಬಲವನ್ನು ಇಲ್ಲಿ ಕಾಣಬಹುದು.
View Posts →
5 posts
ನಾನು ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿ ವಾಸಿಸಿರುವ ಹವ್ಯಾಸಿ ಛಾಯಾಗ್ರಾಹಕಿ, ಮೂಲತಃ ಕೃಷಿಕರ ಹಿನ್ನಲೆಯಿಂದ ಬಂದಿದ್ದರಿಂದಲೇನೊ ಕಾಡು, ಪಕ್ಷಿ, ಕೀಟಗಳ ಕಡೆಗೆ ಹೆಚ್ಚು ಆಸಕ್ತಿ. ಅಲ್ಲದೆ ವನ್ಯಜೀವಿ ಮತ್ತು ನಿರ್ವಹಣೆ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರಿಂದ ಜೀವಜಗತ್ತಿನ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಯಿತು. ಜೀವಸಂಕುಲದ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಬರಹದ ಮೂಲಕ ಓದುಗರಿಗೆ ತಲುಪಿಸಬೇಕೆಂಬುದು ನನ್ನ ಉದ್ದೇಶ.
View Posts →
4 posts
   ಜನ್ಮ ದಿನಾಂಕ: 03/11/1982 ·       ಜನ್ಮ ಸ್ಥಳ: ಶಿವಮೊಗ್ಗ ·       ಪ್ರಾಥಮಿಕ ಶಿಕ್ಷಣ: ಶಿವಮೊಗ್ಗದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ·       ಪದವಿ ಶಿಕ್ಷಣ: ಪ್ರತಿಷ್ಠಿತ ಸಹ್ಯಾದ್ರಿ ವಿಜ್ಞಾನ ಕಾಲೇಜುಶಿವಮೊಗ್ಗ ಇಲ್ಲಿ ಬಿ.ಎಸ್ಸಿ ಪದವಿ -2003 ·       ಸ್ನಾತಕೋತ್ತರ ಶಿಕ್ಷಣ: ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಸ್ವರ್ಣ ಪದಕಕುವೆಂಪು ವಿಶ್ವವಿದ್ಯಾನಿಲಯ-ಶಂಕರಘಟ್ಟ – 2005 ·       ಎಂ.ಫಿಲ್ ಪದವಿ – 2008 - ಕುವೆಂಪು ವಿಶ್ವವಿದ್ಯಾನಿಲಯ-ಶಂಕರಘಟ್ಟ ·       ಪ್ರಸ್ತುತ ಪಿ.ಹೆಚ್.ಡಿ ಸಂಶೋಧನಾ ಅಧ್ಯಯನ – ಶಿವಮೊಗ್ಗ ಜಿಲ್ಲೆಯ ಸಸ್ಯ ವೈವಿಧ್ಯತೆ ಹಾಗೂ ಹಕ್ಕಿಗಳ ವೈವಿಧ್ಯತೆಯ ಪರಿಸರ ಅಧ್ಯಯನ ·       2005-07 – ಸಹ್ಯಾದ್ರಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕನಾಗಿ ವೃತ್ತಿ ಪ್ರಾರಂಭ ·       2007-09 – ಪ್ರತಿಷ್ಟಿತ ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕನಾಗಿ ಸೇವೆ ·       2009 – ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಜೀವಶಾಸ್ತ್ರ ಉಪನ್ಯಾಸಕನಾಗಿ ಕೆ.ಪಿ.ಎಸ್.ಸಿ ಯಿಂದ ಆಯ್ಕೆ. ·       2009-2015 – ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುಸಾಗರ ·       2015 – ಪ್ರಸ್ತುತ – ಸರ್ಕಾರಿ ಪದವಿ ಪೂರ್ವ ಕಾಲೇಜುಸೈನ್ಸ್ ಮೈದಾನಶಿವಮೊಗ್ಗ ·       ಯುಜಿಸಿ ವತಿಯಿಂದ ನಡೆಯುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯಲ್ಲಿ ಎರಡು ಬಾರಿ ತೇರ್ಗಡೆ- -     42ND RANK IN 2011 -     30TH RANK IN 2013 ·       ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ- 2013 (K_SET) ನಲ್ಲಿ ಪ್ರಥಮ rank ನಲ್ಲಿ ತೇರ್ಗಡೆ. ·       Centre for Teachers’ Accreditation (Centa) Teaching Professionals Olympiad ನಲ್ಲಿ ಪ್ರಾದೇಶಿಕ 38 ನೇ rank ನಲ್ಲಿ ತೇರ್ಗಡೆ. ·       ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮದ  (TALP-Technology Assisted Learning Program) Master trainer. ·       ಇತ್ತೀಚಿಗೆ ನಡೆದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರ ವಿಷಯದಲ್ಲಿ 3 ನೇ rank. ·       ಹವ್ಯಾಸಗಳು – ವನ್ಯಜೀವಿ ಛಾಯಾಗ್ರಹಣವೈಜ್ಞಾನಿಕ ಲೇಖನಗಳ ರಚನೆಸಣ್ಣ ಕವಿತೆಗಳ ರಚನೆ, Quotes Writing
View Posts →
4 posts
ವೃತ್ತಿ : ಪ್ರೌಢಶಾಲಾ ಶಿಕ್ಷಕರು ಮೂಲ ಸ್ಥಳ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿ. ಪ್ರಸ್ತುತ ವಿಳಾಸ: ತುಮಕೂರಿನ ಕ್ಯಾತಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರು . ವೃತ್ತಿ ಅನುಭವ : ೨೦ ವರ್ಷಗಳ ಬೋಧನಾ ಅನುಭವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕರು ಪ್ರವೃತ್ತಿ : ಲೇಖನ, ಕಥೆ, ಕವನ , ಹನಿಗವನ, ಗಜಲ್, ಹಾಯ್ಕು ನ್ಯಾನೋ ಕಥೆ ರಚನೆ, ಗಾಯನ ,ಹವ್ಯಾಸಿ ನಾಟಕಕಾರ, ಸಾಲು ದೀಪಾವಳಿ ಎಂಬ ವೈಯಕ್ತಿಕ ಕವನ ಸಂಕಲನ ಪ್ರಕಟವಾಗಿದೆ. ಹತ್ತಕ್ಕೂ ಹೆಚ್ಚು ಪ್ರಾತಿನಿಧಿಕ ಕವನ, ಲೇಖನ ಸಂಗ್ರಹದ ಪುಸ್ತಕಗಳು ಪ್ರಕಟಗೊಂಡಿವೆ. ತಾಲ್ಲೂಕು ,ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಡಿಗಳಲ್ಲಿ ಭಾಗವಹಿಸಿದೆ. ರಾಜ್ಯ ವಿವಿಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ 500 ಕ್ಕೂ ಹೆಚ್ಚು ಕವನ , ಲೇಖನ , ಕಥೆ, ವಿಮರ್ಶೆ, ಹನಿಗವನ ಗಜಲ್ ಇತ್ಯಾದಿ ಪ್ರಕಟವಾಗಿವೆ.
View Posts →
1 posts
ಸಂಶೋಧಕ ಮತ್ತು ಪರಿಸರ ಶಿಕ್ಷಕ. ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ಮತ್ತು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ನಡೆಸುವ ಕನ್ಸರ್ವೇಷನ್ ಬೇಸಿಕ್ಸ್ ಎಂಬ ತರಬೇತಿಗಳನ್ನು ಪಡೆದಿದ್ದಾರೆ. ಪಕ್ಷಿಗಳು, ಸಿಹಿನೀರಿನ ಮೀನುಗಳು, ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಇವರ ಪ್ರಮುಖ ಸಂಶೋಧನಾ ವಿಷಯಗಳಾಗಿವೆ. ಇವರು ಆನಂದವನದ ಜೀವವೈವಿಧ್ಯತೆ ಮತ್ತು ಶೋಭಾವನದ ಪಕ್ಷಿಗಳು ಎಂಬ ಎರಡು ಪುಸ್ತಕಗಳ ಸಹ ಲೇಖಕರಾಗಿದ್ದಾರೆ . ವೆಟ್ ಲ್ಯಾಂಡ್ ಬರ್ಡ್ಸ್ ಆಫ್ ಬೆಂಗಳೂರು ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ. 2018ರಲ್ಲಿ ನಡೆದ ಕೆರೆ ಸಮ್ಮೇಳನದಲ್ಲಿ ಇವರಿಗೆ ಸಹ್ಯಾದ್ರಿ ಇಕಾಲಜಿಸ್ಟ್ ಎಂಬ ಬಿರುದು ಕೊಟ್ಟಿರುತ್ತಾರೆ. ಅಲ್ಲದೆ ಹಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೀನುಗಳು ಮತ್ತು ಪಕ್ಷಿಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ. ಹಾಗೂ ವಿದ್ಯಾರ್ಥಿಗಳು ಕೈಗೊಳ್ಳುವ ಹಲವು ಸಂಶೋಧನಾ ಯೋಜನೆಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
View Posts →

Spread the love
error: Content is protected.