ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನಾಗೇಶ್ ಓ ಎಸ್

ವೃತ್ತಿಯಲ್ಲಿ ಗಣಿತ ಶಿಕ್ಷಕ ನಾನು ಹುಟ್ಟಿ ಬೆಳೆದದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಧ್ಯ ಇರುವ ಒಂದು ಸಣ್ಣ ಹಳ್ಳಿಯಲ್ಲಿ. ನಮ್ಮ ಊರಿನ ಸುತ್ತ ಕಾಡಿರುವ ಕಾರಣವೋ ಏನೋ ಚಿಕ್ಕಂದಿನಿಂದಲೂ ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ . ನನ್ನೀ ಆಸಕ್ತಿಗೆ ಪುಷ್ಠಿ ನೀಡಿದ್ದು ಹಾಗೂ ಪರಿಸರದ ಬಗ್ಗೆ ನನಗೆ ತಿಳಿದದ್ದನ್ನು ಸುತ್ತಲಿನ ಹಳ್ಳಿ ಮಕ್ಕಳಿಗೆ ತಿಳಿಸಿಕೊಡಲು ಅವಕಾಶ ಕಲ್ಪಿಸಿಕೊಟ್ಟಿದ್ದು WCG. ಕನ್ನಡ ಸಾಹಿತ್ಯಕ್ಕೆ ನನ್ನನ್ನು ಎಳೆತಂದದ್ದು ಕೆ ಪಿ ಪೂರ್ಣಚಂದ್ರ ತೇಜಸ್ವಿ ರವರ ಪುಸ್ತಕಗಳು. ಇವರ ಪುಸ್ತಕಗಳಿಂದ ಪ್ರಭಾವಿತನಾಗಿ ಕನ್ನಡ ಸಾಹಿತ್ಯದ ಕೆಲವು ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಓದಿದ ಮೇಲೆ ಕನ್ನಡ ಭಾಷೆಗೆ ಕನ್ನಡ ನಾಡಿಗೆ ನನ್ನ ಕೈಲಾದಷ್ಟು ಸೇವೆ ಮಾಡಬೇಕೆಂಬುದು ಮನಸ್ಸಿನಲ್ಲಿ ನೆಲೆಯೂರಿತು. ಈ ಕನಸು ನನಸಾಗಲು ಅವಕಾಶ ಕಲ್ಪಿಸಿಕೊಟ್ಟಿದ್ದು ಕಾನನ ಇ-ಮಾಸ ಪತ್ರಿಕೆ. ಛಾಯಾಗ್ರಹಣ, ಪಕ್ಷಿ ವೀಕ್ಷಣೆ, ಚಾರಣ , ಪುಸ್ತಕ ಓದುವುದು ನನ್ನ ಕೆಲವು ಹವ್ಯಾಸಗಳು.

    © WCG ಕಾಳೇಶ್ವರಿ ಗ್ರಾಮ ಬೆಂಗಳೂರಿಗೆ ಹೊಂದಿಕೊಂಡಂತೆಯೇ ಇರುವ ಒಂದು ಪುಟ್ಟ ಹಳ್ಳಿ. 15 ಮನೆಗಳಿರುವ ಈ ಗ್ರಾಮವು ಬನ್ನೇರುಘಟ್ಟ-ಆನೇಕಲ್ ಹೆದ್ದಾರಿಯ ಅನತಿದೂರದಲ್ಲಿ ಇದ್ದರೂ ಸಹ...

©ಧನರಾಜ್ ಎಮ್. ಪ್ರತೀ ವರ್ಷದ ಬೇಸಿಗೆಯಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಕ್ಕ-ಪಕ್ಕದಲ್ಲಿರುವ ಹಳ್ಳಿಗಳ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವನ್ಯ ವಿಜ್ಞಾನ ಶಿಬಿರ ಎಂಬ ಬೇಸಿಗೆ ಶಿಬಿರವನ್ನು...

©ಧನರಾಜ್ ಎಂ. ಪರಿಸರ ಮತ್ತು ವಿಜ್ಞಾನದ ಬಗ್ಗೆ ಮಕ್ಕಳಿಗೆ ಅರಿವು ಮತ್ತು ಆಸಕ್ತಿ ಮೂಡಿಸಬೇಕಾದರೆ ಅವರನ್ನು ನಾಲ್ಕು ಗೋಡೆಯೊಳಗೆ ಕೂರಿಸುವ ಬದಲು ಹೊರಗೆ ಕರೆದುಕೊಂಡು ಹೋಗಿ ಅನುಭವದ...

© ನಾಗೇಶ್ ಓ. ಎಸ್, ನತ್ತಿಂಗ ನತ್ತಿಂಗ ಪಕ್ಷಿಯು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಾದ್ಯಂತ ಕಂಡುಬರುತ್ತದೆ. ನೆಲದ ಮೇಲೆ ವಾಸಿಸುವ ಈ ನತ್ತಿಂಗ ಪಕ್ಷಿಯನ್ನು ಮುಂಜಾನೆ...

ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬರಹಗಳನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ? ಕನ್ನಡ ಸಾಹಿತ್ಯ ಪ್ರಿಯರಿಗೆ ತೇಜಸ್ವಿ ಅಚ್ಚು ಮೆಚ್ಚು. ಇವರ ಲೇಖನಗಳು ಅದೆಷ್ಟೋ ಜನರನ್ನು ಕನ್ನಡ ಸಾಹಿತ್ಯಕ್ಕೆ...

ಜ್ಞಾನ ಎಂಬುದು ಸಾಗರವಿದ್ದಂತೆ. ಅದನ್ನು ಮಕ್ಕಳಿಗೆ ತರಗತಿ ಬೋಧನೆಯ ಜೊತೆ ಜೊತೆಗೆ ಬೇರೆ ಬೇರೆ ವಿಧಾನಗಳಿಂದಲೂ ನೀಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ WCG ತಂಡದ ಸದಸ್ಯರು ಮಕ್ಕಳಿಗೆ...

ಕೀಟಗಳ ಲೋಕವೇ ಒಂದು ವಿಸ್ಮಯ ಪ್ರಪಂಚ. ಅವುಗಳ ಬಗ್ಗೆ ತಿಳಿಯುತ್ತಾ ಹೊರಟರೆ ಮುಗಿಸಲು ಇಡೀ ಜೀವಮಾನವೇ ಸಾಲದು. ಅವುಗಳ ಜೀವನ ಚಕ್ರ, ಬೇಟೆಯಾಡುವ ಕೌಶಲ್ಯ, ಶತ್ರುವಿನಿಂದ ರಕ್ಷಿಸಿಕೊಳ್ಳಲು...

ಕಾನನ, ಜ್ಞಾನದ ನಿಧಿ, ಶಕ್ತಿಯ ಮೂಲ, ಸೌಂದರ್ಯದ ಗಣಿ, ಸ್ಫೂರ್ತಿಯ ಆಗರ, ಈ ಸವಿಯನ್ನು ಈ ಕಾನನದ ಸುತ್ತಲೂ ವಾಸವಾಗಿರುವ ಚಿಣ್ಣರಿಗೂ ಪರಿಚಯಿಸಬೇಕೆಂಬ ಆಶಯದಿಂದ WCG ಯು...