Author: ಭಗವತಿ (ಬ್ಯಾಗ್ಸ)
ನಾನು ಒಬ್ಬ ಪಕ್ಷಿ ಪ್ರೇಮಿ ಮತ್ತು ಅದರ ಛಾಯಾಗ್ರಾಹಕಿ, ಇತರ ವನ್ಯ ಜೀವಿಗಳ ಛಾಯಾಗ್ರಹಣದಲ್ಲಿ ಆಸಕ್ತಿ ತುಂಬಾ ಇದೆ. ನಾನು ನನ್ನ ತಂದೆ ಸ್ಥಾಪಿಸಿದ ಒಂದು ಸಣ್ಣ ಕೈಗಾರಿಕೋದ್ಯಮದಲ್ಲಿ ನನ್ನ ಸೇವೆ ಮತ್ತು ಅದರ ಉನ್ನತಿ ನನ್ನ ಕೆಲಸ. ನನ್ನ ಮೇಲಿನ ಜವಾಬ್ದಾರಿ ಒಬ್ಬ ಮಗಳದಾಗಿ, ಒಬ್ಬ ಪತ್ನಿಯಾಗಿ, ಒಬ್ಬ ಮಗಳ ತಾಯಿಯಾಗಿ, ಒಬ್ಬ ಅತ್ತೆಯ ಸೊಸೆಯಾಗಿ ಇರುತ್ತದೆ. ನಾನು ನನ್ನ ಬಿಡುವಿನ ಸಮಯದಲ್ಲಿ ಛಾಯಾಚಿತ್ರದ ಹವ್ಯಾಸ ಬೆಳೆಸಿಕೊಂಡೆ ಮತ್ತು ಇದು ನನ್ನ ಮನಸ್ಸಿಗೆ ತುಂಬಾ ಅಚ್ಚುಮೆಚ್ಚು.
ಹಾಗೊಮ್ಮೆ ಹೀಗೊಮ್ಮೆ ಚಾರಣ ದಲ್ಲಿಯೂ ನನ್ನ ಆಸಕ್ತಿ , ಅದಕ್ಕೆ ನನ್ನ ಮಗಳ ಕಂಪನಿ ಇರುತ್ತದೆ...
ನನಗೆ ಶಾಸ್ತ್ರೀಯ ನೃತ್ಯ, ಸಂಗೀತದ ಅಭ್ಯಾಸವನ್ನು ಮಾಡಿದ್ದೇನೆ. ಸಮರ ಕಲೆಯನ್ನು ಅಭ್ಯಾಸ ಮಾಡಿದವಳು. ಹೀಗೆ ನನ್ನನ್ನು ನಾನು ಯಾವಾಗಲೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನನಗೆ ಇಷ್ಟ. ಸಾಮಾಜಿಕ ವಾಗಿಯೂ ಸಕ್ರಿಯವಾಗಿದ್ದೆನೆ. ಹೀಗಿದೆ ನನ್ನ ಇದುವರೆಗಿನ ಜೀವನ, ಮಂದಿನ ಜೀವನ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಸರ, ವನ್ಯಜೀವಿಗಳ ಸಂರಕ್ಷಣೆಗಾಗಿ ನನ್ನ ಸೇವೆ ಮೀಸಲು.