ವನಬಂಧ-18
ಎಡದಿಂದ ಬಲಕ್ಕೆ:
1. ಗಾಡಿಯನ್ನು ಎಳೆಯುವ ಎತ್ತಿನ ಕುತ್ತಿಗೆಯ ಮೇಲೆ ಇರುವ ಭಾರ. (2)
2. ಈ ಪಕ್ಷಿಯ ಮುಖ ಮಂಡೂಕನಿಗೆ ಹೋಲುತ್ತದೆ (4)
3. ಕಲ್ಲು ಮುಳ್ಳುಗಳಿದ್ದರೂ ಚಟಚಟನೆ ಚಟುವಟಿಕೆಯಿಂದ ಇರುವ ಹಕ್ಕಿ (5)
4. ಎರಡಕ್ಷರದ ಮಾರ್ಜಾಲ (2)
5. ಎಲೆಯ ದಂಟು ಬಲವಾಗುತ್ತ ಹಿಡಿಕೆಯಂತಹ ರಚನೆಯಾಗಿ ಬದಲಾದ ಭಾಗ (2)
6. ಹುಲಿಯಂತಹ ಬೇಟೆಗಾರ ಪ್ರಾಣಿಗಳಿಗೆ ಆಹಾರವಾಗುವ ಈ ಸಸ್ತನಿಗಳು ಪ್ರಾಥಮಿಕವಾಗಿ ಅಧಿಕ ಸಂಖ್ಯೆಯಲ್ಲಿ ಇರುತ್ತವೆ. (2)
7. ಎತ್ತು, ಕುದುರೆಗಾಡಿ ಮುಂತಾದ ವಾಹನಗಳನ್ನು ಓಡಿಸುವಾಗ ಬಳಸುವ ಹಗ್ಗದ ಕೋಲು (4)
8. ಪುರದೊಳಗೆ ಗುನುಗುನಿಸುವ ಈ ಬೆಕ್ಕು ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಓಡಾಡುತ್ತದೆ. (5)
ಮೇಲಿನಿಂದ ಕೆಳಕ್ಕೆ:
1. ಈ ಹಕ್ಕಿಗೆ ನೊಣ ಹಿಡಿಯುವುದೊಂದೇ ಕೆಲಸ (5)
2. ಕಪ್ಪು ಬಣ್ಣದ ಈ ಬುಲ್‌ಬುಲ್ ಹಕ್ಕಿಗೆ ಕೊಕ್ಕು ಮಾತ್ರ ಗುಲಾಬಿ ಬಣ್ಣದ್ದು (6)
3. ಬೆಳ್ಳಕ್ಕಿಯಂತೆ ಬೆಳ್ಳಗೆ ಸುಂದರವಾಗಿದ್ದರೂ ಕೊಕ್ಕಿನ ತುದಿಯಲ್ಲಿ ಅಗಲವಾದ ಚನೆಯಿದೆ. (6)
4. ಚಂದಿರನು ಪೂರ್ಣಪ್ರಮಾಣದಲ್ಲಿ ಬೆಳಗುತ್ತ ಹರಡುವ ಬೆಳಕು (5)
6. ಐಹೊಳೆ ಪಟ್ಟದ ಕಲ್ಲಿನ ಸಾಲಿಗೆ ಸೇರುವ ಈ ಪ್ರದೇಶ ಒಂದು ಬೀಜದ ಹೆಸರಿನಲ್ಲಿ ಪ್ರಸಿದ್ಧವಾಗಿದೆ. (3)
7. ಕಡಲ ದಂಡೆಗಳಲ್ಲಿ ಏಡಿಗಳನ್ನು ಬಕಬಕನೆ ಭಕ್ಷಿಸುವ ಈ ಹಕ್ಕಿ ಇಲ್ಲಿ ತಲೆಕೆಳಗಾಗಿದೆ (4)
8. ಹೆಬ್ಬುಲಿಯ ಕತೆಯ ಹಸುವೊಂದು ಇಲ್ಲಿ ಕೋಟಿ ಕೋಟಿ ಪುಣ್ಯ ಸಂಪಾದಿಸಿದೆ (4)
9. ಬೆಟ್ಟ, ಗುಡ್ಡ, ಕಾಡು ಇವುಗಳಿಗೆ ಹಳೆಯ ಕನ್ನಡದ ಒಂದು ಹೆಸರು (4)
ವನಬಂಧ – 17 (ಅಕ್ಟೋಬರ್ – 2026) ರ ಉತ್ತರಗಳು
ಎಡದಿಂದ ಬಲಕ್ಕೆ
1. ಸೆಳೆವ 2. ಚಿಟ್ಟುಕೋಳಿ 3. ಕರಿಗಿಡುಗ 5. ಜಡಿಮಳೆ 7. ಅಡವಿ ಕೀಚುಗ 8. ನಾಮ ಕೋಳಿ 9. ಮರಕಪ್ಪೆ 10. ಸಿಂಪಿಗ
ಮೇಲಿನಿಂದ ಕೆಳಕ್ಕೆ
1. ಹಾವಸೆ 2. ಚಿಟವ 3. ಕತ್ತಾಳೆ 4. ಮುಗಿಲು 5. ಗೀಜಗ 6. ಬೆಳೆ 7. ಅರಳಿಮರ 10. ಗದ್ದೆ ಪಿಪಿಳೀಕ
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

– ಸುಬ್ಬು ಬಾದಲ್
ಬೆಂಗಳೂರು ಜಿಲ್ಲೆ



