ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನಿಸರ್ಗ ಸಂಗೀತ

ಬೆಳಗಿನ ಹಕ್ಕಿಗಾನದಿಂದ ಮಳೆ, ಗುಡುಗು, ಜಲಪಾತ ಮತ್ತು ಸಮುದ್ರದ ಅಲೆಗಳವರೆಗೆ ಪ್ರಕೃತಿಯ ಪ್ರತಿ ಶಬ್ದವನ್ನೂ ಸಂಗೀತವಾಗಿ ಕಾಣುವ ಕವನ. ನಿಸರ್ಗದ ಲಯ, ತಾಳ ಮತ್ತು ಭಾವಗಳ ಸಮತೋಲನವನ್ನು ಇದು ಆಚರಿಸುತ್ತದೆ.

© ಧನರಾಜ್ ಎಂ

ಬೆಳಗಾಗುತಲಿ ಕೇಳಿ ಬಂತು ಹಕ್ಕಿಗಳ ಚಿಲಿಪಿಲಿ…
ಕಿವಿಗಳಿಗೆ ಆನಂದ ತಂತು ಬೀಸಿ ಬಂದ ತಂಗಾಳಿ.
ಮನಸಿಗೆ ಮುದ ನೀಡುವ ಚಟಪಟ ಮಳೆಗಳ ಹನಿ,
ಮಳೆಯೊಂದಿಗೆ ಜೊತೆಯಾದವು ಕಪ್ಪೆ, ಕೀಟಗಳ ದನಿ!

ಮುಗಿಲ ಸೀಳಿದಂತೆ ಹೊರ ಹೊಮ್ಮುವ ಗುಡುಗು,
ಸಂಗಾತಿಗಳ ಸೆಳೆಯವ ಪ್ರಾಣಿಪಕ್ಷಿಗಳ ಕರೆ ಸೊಬಗು,
ದಡಕ್ಕನೆ ಬೆಚ್ಚಿ ಬೀಳಿಸುವ ಭೂಕಂಪನ,
ಬೆಂಕಿಯ ಬೇಗೆಯಲಿ ವಸ್ತುಗಳ ದಹನ!

ಎತ್ತರದಿಂದ ಧುಮುಕುವ ಜಲಪಾತದ ಭೋರ್ಗರೆತ.
ನಾ ಮುಂದು ತಾ ಮುಂದೆಂದು ಜಿಗಿವ, ಸಮುದ್ರದ ಅಲೆಗಳ ಮೊರೆತ,
ಅಲ್ಲಲ್ಲಿ ತರಗೆಲೆಗಳ ತಕಧಿಮಿತ,
ಎಲ್ಲೆಡೆ ತುಂಬಿದೆ ನಿಸರ್ಗ ಸಂಗೀತ!

ಗಾಳಿಯಲಿ ತರಂಗಗಳ ಕಂಪನ
ಎಲ್ಲದರಲ್ಲೂ ಅಡಗಿದೆ ಸ್ವರಗಳ ಇಂಪನ
ರಾಗ, ತಾಳ, ಭಾವಗಳ ಸಮ್ಮಿಲನ…
ನಿಶಬ್ದದಿ ಆಲಿಸುವ ಶಬ್ದಗಳ ಸಮತೋಲನ!

–ದೀಪಿಕಾ ಬಾಯಿ. ಎನ್.
ಬೆಂಗಳೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *