ವನಬಂಧ-17
ಎಡದಿಂದ ಬಲಕ್ಕೆ:
1. ಸೆಳೆಯುವುದು ಈ ಬೇಟೆಗಾರ ಹಕ್ಕಿಯ ಕೆಲಸವಲ್ಲ (3)
2. ತಲೆಚಿಟ್ಟು ಹಿಡಿಸುವ ಕೋಳಿಗೆ ಹೀಗೆ ಕರೆಯಬಹುದಾ (4)
3. ಈ ಗಿಡುಗ ಕಪ್ಪಗಿದ್ದರೂ ಬಲು ಗಂಭೀರ (5)
5. ಜರಡಿಯಲ್ಲಿ ಈ ಮಳೆಯನ್ನು ಹಿಡಿದಿಡಲು ಆಗುವುದಿಲ್ಲ (4)
7. ಈ ಕೀಚಕ ಅಡಗಿಕೊಂಡಿರುವುದು ಕಾಡಿನಲ್ಲಿ (6)
8. ನೀರಿನ ಮೇಲೆ ಈಜುತ್ತ ತೇಲುವ ಈ ಕೋಳಿಗೊಂದು ಹೆಸರು ಬೇಕೇ? (4)
9. ಕಪ್ಪೆಯೊಂದು ಮರದಲ್ಲಿ ವಾಸಿಸುತ್ತಿದೆ (4)
10. ಸಂಪಿಗೆ ಗಿಡಕ್ಕೂ ಗೂಡು ಹೆಣೆಯುವ ಈ ಹಕ್ಕಿಗೂ ಯಾವ ನಂಟು? (3)
ಮೇಲಿನಿಂದ ಕೆಳಕ್ಕೆ:
1. ಹಾವು ಅಲ್ಲ ಇದು ಆದರೆ ಒಂದು ಬಗೆಯ ಪಾಚಿ (3)
2. ಕೆರೆದಂಡೆಯಲ್ಲಿ ಚಿಟಪಟನೆ ನಡೆದಾಡುವ ಪಕ್ಷಿ (3)
3. ತಲೆಕೆಳಗಾದ ಈ ಮರಕ್ಕೂ ಕತ್ತೆಗೂ ಯಾವ ಸಂಬಂಧವೂ ತಾಳೆಯಾಗುವುದಿಲ್ಲ (3)
4. ಎಂದಿಗೂ ಮುಗಿಯದ ಆಗಸ (3)
5. ನೇತಾಡುವ ಗೂಡುಗಳನ್ನು ಹುಲ್ಲಿನಿಂದ ಹೆಣೆಯುವ ಹಕ್ಕಿ (3)
6. ತೋಟ, ಹೊಲ, ಗದ್ದೆಗಳಲ್ಲಿ ಉತ್ಪಾದಿಸುವ ಆಹಾರ (2)
7. ದೊಡ್ಡ ಗಾತ್ರದ ಈ ಮರದಲ್ಲಿ ಹೂವು ಅರಳಬಲ್ಲುದೇ (5)
10. ಪಿಳಿ ಪಿಳಿ ಕಣ್ಣು ಬಿಡುವ ಈ ಹಕ್ಕಿ ಗದ್ದೆಯಲ್ಲಿ ಕಾಣಸಿಗುತ್ತದೆ. (6)
ವನಬಂಧ – 16 (ಸೆಪ್ಟೆಂಬರ್ – 2026) ರ ಉತ್ತರಗಳು
ಎಡದಿಂದ ಬಲಕ್ಕೆ
1. ಅಡಿಕೆ 2. ನೆಲಗಡಲೆ 3. ರುದ್ರಾಕ್ಷ 4. ಬದನಿಕೆ 5. ಪಾಪಾಸುಕಳ್ಳಿ 6. ಕೋರೆಹಲ್ಲು 7. ವರಾಹ 8. ಹೊಣೆ
ಮೇಲಿನಿಂದ ಕೆಳಕ್ಕೆ
1.ಅಶೋಕವೃಕ್ಷ 2. ಕೆನೆಮೊಸರು 3. ದ್ರಾಕ್ಷಿಬಳ್ಳಿ 4. ಗರಿಕೆ 5. ಕೋಗಿಲೆ 6. ಹಲಸಿನಹಣ್ಣು 7. ನವಣೆ 9. ನಿಂಬೆಹುಲ್ಲು
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 20ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

– ಸುಬ್ಬು ಬಾದಲ್
ಬೆಂಗಳೂರು ಜಿಲ್ಲೆ



