ಕಾನನ

ನಿಸರ್ಗದೆಡೆಗೆ ಪಯಣ

ನೀವೂ ಕಾನನಕ್ಕೆ ಬರೆಯಬಹುದು

© ಅರವಿಂದ ರಂಗನಾಥ್

ಯಾವ ಪ್ರದೇಶ ಶಾಶ್ವತವಾಗಿ ಅಥವಾ ಕಾಲಕ್ಕೆ ತಕ್ಕಂತೆ ನೀರಿನಿಂದ ಆವೃತವಾಗಿರುತ್ತದೋ ಆ ಪ್ರದೇಶವನ್ನ ಜೌಗು ಪ್ರದೇಶ ಎನ್ನುತ್ತಾರೆ. ಸಣ್ಣಸಣ್ಣ ತೊರೆಗಳು, ಕೆರೆಗಳು, ನದಿಗಳು, ಹವಳದ ದಿಣ್ಣೆಗಳು, ಮ್ಯಾಂಗ್ರೋವ್ ಕಾಡುಗಳು ಮೊದಲಾದವು ನೈಸರ್ಗಿಕ ಜೌಗು ಪ್ರದೇಶಗಳಾದರೆ ಭತ್ತದ ಗದ್ದೆ, ಮೀನುಸಾಕಾಣೆ ಕುಂಟೆಗಳು, ಉಪ್ಪಿನ ಇಂಗು ಗುಂಡಿಗಳು ಮಾನವ ನಿರ್ಮಿತ ಜೌಗು ಪ್ರದೇಶಗಳಾಗಿವೆ. ಹಿಂದೆ ಈ ಜೌಗು ಪ್ರದೇಶಗಳ ಪ್ರಾಮುಖ್ಯತೆ ಹಾಗೂ ಪರಿಸರದಲ್ಲಿ ಅವುಗಳ ಪಾತ್ರದ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿರಲಿಲ್ಲ ಹಾಗಾಗಿ   2ನೇ ಫೆಬ್ರವರಿ 1971 ರಂದು ಕ್ಯಾಸ್ಟಿಯನ್ ಸಮುದ್ರದ ತೀರದಲ್ಲಿರುವ ರಮ್ ಸರ್ ನಲ್ಲಿ ನಡೆದ ಜೌಗು ಪ್ರದೇಶಗಳ ಸಮಾವೇಶದಲ್ಲಿ ಈ ಜೌಗು ಪ್ರದೇಶಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತೀ ವರ್ಷ 2ನೇ ಫೆಬ್ರವರಿ ಯಂದು ವಿಶ್ವ ಜೌಗು ಪ್ರದೇಶದ ದಿನ ಎಂದು ಆಚರಿಸಲು ತೀರ್ಮಾನಿಸಲಾಯಿತು.

ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು.  ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ.  ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.