ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾನನ – ಜನವರಿ – ೨೦೨೫

ಕಾನನ ಉಚಿತ ಮಾಸಪತ್ರಿಕೆ ಜನವರಿ 2025ರ ಸಂಚಿಕೆ ಇಲ್ಲಿದೆ! ಈ ತಿಂಗಳ ಸಂಚಿಕೆಯಲ್ಲಿ ಕಾಡಿನ ಜೀವನದ ರೋಚಕ ಕಥೆ 'ಹೊನ್ನ - ಮಿಕ ಬೇಟೆ', ಅಪರೂಪದ ಸೀತಾಳೆ ಆರ್ಕಿಡ್ ಸಸ್ಯದ ಸೌಂದರ್ಯ, ಆರ್ಕ್ಟಿಕ್ ತಾಪಮಾನ ಏರಿಕೆಯ ವೈಜ್ಞಾನಿಕ ಲೇಖನ, ಪ್ರಕೃತಿ ಕವನ ಹಾಗೂ ಅಪರೂಪದ ಪಕ್ಷಿಗಳ ಸುಂದರ ಛಾಯಾಚಿತ್ರಗಳನ್ನು ಓದಿ ಆನಂದಿಸಿ
ಕಾನನ ಜನವರಿ 2025 ಮಾಸಪತ್ರಿಕೆಯ ಮುಖಪುಟದಲ್ಲಿರುವ ಹಪ್ಪಟೆ ಹಾವು

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ :

ಕಾನನ – ಜನವರಿ 2025 ಸಂಚಿಕೆಯಲ್ಲಿರುವ ಲೇಖನಗಳು ಹಾಗೂ ವಿಷಯಗಳು:

  • ಹೊನ್ನ – ಮಿಕ ಬೇಟೆ:ಮಂಗನಾಯಕನಹಳ್ಳಿ ಹಾಗೂ ತುಂಗಭದ್ರಾ ನದಿ ತೀರದ ಹಳ್ಳಿಯಲ್ಲಿ ಲಂಬಾಣಿ ಸಮುದಾಯದ ಜನರ ಬದುಕು, ಕಾಡಿನ ನಂಟು, ಕಾಡುಹಂದಿ (ಮಿಕ) ಬೇಟೆಯ ರೋಚಕ ಅನುಭವಗಳು, ಹೊನ್ನ ಎಂಬ ವ್ಯಕ್ತಿ ಮಿಕದ ದಾಳಿಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡಿ ಮರುಜನ್ಮ ಪಡೆದ ಘಟನೆ ಮತ್ತು ಪರಿಸರ-ವನ್ಯಜೀವಿ ಸಂರಕ್ಷಣೆಯ ಜಾಗೃತಿ.
    ಲೇಖಕರು: ಡಾ. ಚಂದ್ರಪ್ಪ ಹೆಚ್.
  • ಕಾನನದ ಬೆಡಗಿ ಸೀತಾಳೆ ಬಗ್ಗೆ ಗೊತ್ತಾ?: ಮಲೆನಾಡಿನ ಹಸಿರಿನ ನಡುವೆ ಬೆಳೆಯುವ ಮರಬಳ್ಳಿ/ಸೀತಾದಂಡೆ (ಸೀತಾಳೆ) ಆರ್ಕಿಡ್ ಸಸ್ಯದ ಸೌಂದರ್ಯ, ಅದರ ವೈಶಿಷ್ಟ್ಯಗಳು ಹಾಗೂ ರಾಮಾಯಣದ ಸೀತೆಯೊಂದಿಗಿನ ಐತಿಹಾಸಿಕ ಕಥೆಯ ಪರಿಚಯ.
    ಲೇಖಕರು: ಮನೋಜ್ ದೊಡವಾಡ
  • ಅದೊಂದು ಬೇರೆಯದೇ ಅನುಭೂತಿ… :ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅರಣ್ಯ ಸಫಾರಿ ಪ್ರವಾಸದ ಅನುಭವ; ಕಾಡೆಮ್ಮೆ ಮತ್ತು ಭವ್ಯವಾದ ಹುಲಿಯನ್ನು ಎದುರುಗೊಂಡ ರೋಚಕ ಕ್ಷಣಗಳು ಹಾಗೂ ಮಾನವನ ಜೀವನದ ಹೆಜ್ಜೆಗುರುತುಗಳ ಚಿಂತನೆ.
    ಲೇಖಕರು: ಧನಂಜಯ ಜೀವಾಳ
  • CO₂ ಉಗುಳುವ ಆರ್ಕ್ಟಿಕ್ ಕಾರ್ಖಾನೆ! : ಜಾಗತಿಕ ತಾಪಮಾನ ಏರಿಕೆಯಿಂದಾಗಿ ಆರ್ಕ್ಟಿಕ್ ‘‘ಟಂಡ್ರಾ’ ಪ್ರದೇಶದ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ (CO₂) ಹೊರಸೂಸುತ್ತಿರುವ ಆತಂಕಕಾರಿ ವೈಜ್ಞಾನಿಕ ಸಂಶೋಧನೆಯ ಲೇಖನ.
    ಲೇಖಕರು: ಜೈಕುಮಾರ್ ಆರ್.
  • ನಿರೀಕ್ಷೆ (ಕವನ) :ರೈತ ಬಿತ್ತಿದ ಬೀಜ, ಪ್ರಕೃತಿಯ ಸಹಕಾರ, ಮರ-ಗಿಡಗಳು ಜಗತ್ತಿಗೆ ನೀಡುವ ಕೊಡುಗೆ ಮತ್ತು ಹೊಸ ಬದುಕಿನ ಆಸೆಯನ್ನು ಬಿಂಬಿಸುವ ಭಾವಪೂರ್ಣ ಕವನ.
    ಲೇಖಕರು: ಕಲ್ಪನ ಎಂ.
  • ಪ್ರಕೃತಿ ಬಿಂಬ :ಮಕ್ಮಲ್ ನೆತ್ತಿಯ ಮರಗುಬ್ಬಿ (Velvet-fronted Nuthatch), ಗುಳುಮುಳುಕ (Little Grebe), ದೊಡ್ಡ ಬಂಡೆಗೊರವ (Great Thick-knee), ಮತ್ತು ಚಾತಕ ಪಕ್ಷಿ (Jacobin Cuckoo) – ಈ ನಾಲ್ಕು ಅಪರೂಪದ ಪಕ್ಷಿಗಳ ಪರಿಚಯ ಮತ್ತು ಮಾಹಿತಿ.
    ಲೇಖಕರು: ವಿನೀತ್ ಕರ್ಥ , ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *