ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾನನ – ಸೆಪ್ಟೆಂಬರ್ – 2025

ಕಾನನ ಸೆಪ್ಟೆಂಬರ್ 2025ರ ಪ್ರಕೃತಿ ಮತ್ತು ವನ್ಯಜೀವಿ ಮಾಸಪತ್ರಿಕೆಯ ಸಂಚಿಕೆಯ ಪರಿಚಯ. ಇದರಲ್ಲಿ ಕಾಳಿಂಗ ಸರ್ಪ, ಸ್ಪೂನ್‌ಬಿಲ್ ಹಕ್ಕಿ, ಮುತ್ತುಗ ಮರ ಹಾಗೂ ಹಾವಿನ ಜಾತಿಗಳ ಕುರಿತ ರೋಚಕ ಲೇಖನಗಳಿವೆ.
ಕಾನನ ಸೆಪ್ಟೆಂಬರ್ 2025 ಮ್ಯಾಗಜೀನ್ ಮುಖಪುಟ ಮತ್ತು ಲೇಖನಗಳು

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ :

ಕಾನನ ಸೆಪ್ಟೆಂಬರ್ 2025 ಸಂಚಿಕೆಯಲ್ಲಿರುವ ವಿಷಯಗಳು

ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ.

ಲೇಖನಗಳು:

  • ಭಯಾನಕ ವಿಷದ ಕಾಳಿಂಗ ಸರ್ಪ: ಕಾಳಿಂಗ ಸರ್ಪದ ವೈಜ್ಞಾನಿಕ ಹೆಸರು, ದೈಹಿಕ ಲಕ್ಷಣಗಳು, ವಾಸಸ್ಥಾನ, ಬೇಟೆಯಾಡುವ ಹಾಗೂ ಆಹಾರ ಕ್ರಮ, ರಕ್ಷಣೆಯ ತಂತ್ರಗಳು ಮತ್ತು ಸಂತಾನೋತ್ಪತ್ತಿಯ ಸಂಪೂರ್ಣ ಪರಿಚಯ.
    ಲೇಖಕರು: ಸಂತೋಷ್ ರಾವ್ ಪೆರ್ಮುಡಾ
  • ಚಮಚ ಆಕಾರದ ಕೊಕ್ಕಿನ ವಿಶಿಷ್ಟ ಹಕ್ಕಿ:ಯುರೇಶಿಯನ್ ಸ್ಪೂನ್‌ಬಿಲ್ (ಚಮಚದ ಕೊಕ್ಕು) ಪಕ್ಷಿಯ ಲಕ್ಷಣಗಳು, ಆವಾಸಸ್ಥಾನ, ಆಹಾರ ಪದ್ಧತಿ, ಸಂತಾನೋತ್ಪತ್ತಿ ಹಾಗೂ ಅದರ ವಿಶಿಷ್ಟ ಕೊಕ್ಕಿನ ಪ್ರಮುಖ ಮಾಹಿತಿ.
    ಲೇಖಕರು: ಡಾ. ಎಸ್. ಶಿಶುಪಾಲ
  • ವನಸುಮ (ಮುತ್ತುಗ / Flame of the Forest):ಮುತ್ತುಗ ಮರದ ವೈಶಿಷ್ಟ್ಯಗಳು, ಇಸ್ತ್ರಿ ಎಲೆಯ ಬಳಕೆ, ನಿಸರ್ಗದಲ್ಲಿ ಇದರ ಮಹತ್ವ ಹಾಗೂ ಪ್ರಾಚೀನ ಕಾಲದಿಂದಲೂ ಜನಪದ ವೈದ್ಯದಲ್ಲಿ ಇರುವ ವಿವಿಧ ಔಷಧೀಯ ಗುಣಗಳ ಪರಿಚಯ.
    ಲೇಖಕರು: ಕೆ. ಪಿ. ಶಂಕರಪ್ಪ ಮತ್ತು ಶಾಂತಮ್ಮ ಎಸ್.
  • ವನಬಂಧ – 04:ಕಾಡು, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕನ್ನಡ ಪದಬಂಧ ಆಟ.
    ಲೇಖಕರು: ಅಕ್ಷತ ಹೆಚ್. ಕೆ.
  • ಕಚ್ಚಲು ಆರಿಸುವ ಸೊಳ್ಳೆಗಳು (ವಿವಿ ಅಂಕಣ):ಸೊಳ್ಳೆಗಳು ಪ್ರತಿಯೊಬ್ಬರನ್ನೂ ಒಂದೇ ರೀತಿ ಕಚ್ಚುವುದಿಲ್ಲ, ಕಚ್ಚುವ ಮೊದಲು ಚರ್ಮ/ಬೆವರಿನ ರುಚಿಯನ್ನು ಗ್ರಹಿಸಿ ಆರಿಸಿಕೊಳ್ಳುತ್ತವೆ ಎಂಬ ಕುತೂಹಲಕಾರಿ ಸಂಶೋಧನೆಯ ವಿವರ.
    ಲೇಖಕರು: ಜೈಕುಮಾರ್ ಆರ್
  • ಮಲೆನಾಡಿನ ಮೈಸೊಬಗು (ಕವನ):ಮಲೆನಾಡಿನ ಪ್ರಕೃತಿ ಸೌಂದರ್ಯ, ಹಸಿರು, ವನ್ಯಜೀವಿಗಳು ಮತ್ತು ಮಳೆಯ ರಮಣೀಯತೆಯನ್ನು ಬಣ್ಣಿಸುವ ಸುಂದರ ಕವನ.
    ಲೇಖಕರು: ರಾಮಲಿಂಗ ಮಾಡಗಿರಿ
  • ಪ್ರಕೃತಿ ಬಿಂಬ: ತಗಡು ಹಪ್ಪಾಟೆ ಹಾವು, ಆಭರಣದ ಹಾವು, ಕುಕ್ರಿ ಹಾವು ಮತ್ತು ಹವಳದ ಹಾವುಗಳ ಬಗ್ಗೆ ಸಂಪೂರ್ಣ ಮಾಹಿತಿ.
    ಲೇಖಕರು:ದೀಪಕ್ ಎಲ್ ಎಂ & ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *