ನೀವೂ ಕಾನನಕ್ಕೆ ಬರೆಯಬಹುದು
© Public domain
ಹಿಮ ಚಿರತೆಗಳು ಸಾಮಾನ್ಯವಾಗಿ 3000-4500 ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತವೆ. ಅವುಗಳ ದೇಹವು ಶೀತ ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇತರ ದೊಡ್ಡ ಬೆಕ್ಕುಗಳಂತೆ ಹಿಮ ಚಿರತೆಗಳಿಗೆ ಘರ್ಜಿಸಲು ಬರುವುದಿಲ್ಲ. ಅವುಗಳು ಚಿರತೆಗಳಿಗಿಂತ ಹುಲಿಗಳ ಲಕ್ಷಣ ಹೆಚ್ಚು ಹೊಂದಿರುತ್ತವೆ. ಹಿಮ ಚಿರತೆಗಳು ಒಂದೇ ರಾತ್ರಿಯಲ್ಲಿ 25 ಮೈಲುಗಳಷ್ಟು ಪ್ರಯಾಣಿಸಬಲ್ಲವು. ಕಾಡಿನಲ್ಲಿ, ಹಿಮ ಚಿರತೆಗಳ ಜೀವಿತಾವಧಿ ಸುಮಾರು ಹತ್ತು ವರ್ಷಗಳು, ಅಕ್ರಮ ವ್ಯಾಪಾರಕ್ಕಾಗಿ ಬೇಟೆಯಾಡುವುದು ಮತ್ತು ಹವಾಮಾನ ಬದಲಾವಣೆ ಹಿಮ ಚಿರತೆಗಳ ಉಳಿವಿಗೆ ಅಡ್ಡಿಯಾಗುತ್ತಿದೆ. ಒಳ್ಳೆಯ ಸುದ್ದಿ ಎಂದರೆ ಹಿಮ ಚಿರತೆಗಳು ಅಳಿವಿನಂಚಿನಲ್ಲಿಲ್ಲ. ಅವುಗಳನ್ನು ಈಗ IUCN ನಿಂದ “ದುರ್ಬಲ” ಎಂದು ವರ್ಗೀಕರಿಸಲಾಗಿದೆ. ದುರ್ಬಲವಾಗಿರುವ ಪ್ರಭೇದಗಳು ಮೂಲಭೂತವಾಗಿ ಅಳಿವಿನಂಚಿನಲ್ಲಿರುವ ಪಟ್ಟಿಯ ಕಡೆಗೆ ಚಲಿಸುತ್ತವೆ. ಹಿಮ ಚಿರತೆಗಳ ಬಗ್ಗೆ ಜಾಗೃತಿ ಮೂಡಿಸಲು ಅಕ್ಟೋಬರ್ 23 ರಂದು ವಿಶ್ವ ಹಿಮ ಚಿರತೆ ದಿನವೆಂದು ಆಚರಿಸಲಾಗುತ್ತದೆ.
ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.



