ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾನನ – ನವೆಂಬರ್ – 2025

ಕಾನನ ನವೆಂಬರ್ 2025ರ ಇ-ಪತ್ರಿಕೆಯನ್ನು ಓದಿ. ಕಾಡಿನ ವಿಸ್ಮಯಗಳು, ಪರಿಸರ ಸಂರಕ್ಷಣೆ ಮತ್ತು ವಿಜ್ಞಾನದ ಕುತೂಹಲಕಾರಿ ಮಾಹಿತಿಯನ್ನು ಒಳಗೊಂಡಿರುವ ಈ ಮಾಸಿಕ ಸಂಚಿಕೆಯ PDF ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಭೇಟಿ ನೀಡಿ.
ಕಾನನ ಇ-ಪತ್ರಿಕೆ ನವೆಂಬರ್ 2025 ಮುಖಪುಟ - ವನ್ಯಜೀವಿ ಮತ್ತು ಪರಿಸರ ಮಾಸಪತ್ರಿಕೆ

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ :

ಕಾನನ ನವೆಂಬರ್ 2025 ಸಂಚಿಕೆಯಲ್ಲಿರುವ ವಿಷಯಗಳು:

ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ, ಸಸ್ಯರಾಶಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಆಸಕ್ತಿಕರ ಲೇಖನಗಳಿವೆ.

ಸಮುದಾಯ ರಕ್ಷಿತ ‘ವಡೇನ ಕೆರೆ’ – ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿಯ ಕಾಳೇಶ್ವರಿ ಗ್ರಾಮದ ವಡೇನ ಕೆರೆಯ ಇತಿಹಾಸ, ಆಧುನಿಕತೆಯಿಂದ ಎದುರಾದ ಅತಿಕ್ರಮಣ, ಯುವಕರು ಮತ್ತು WCG ತಂಡವು ಕಾನೂನು ಹೋರಾಟ ಹಾಗೂ ‘ಕೆರೆ ಹಬ್ಬ’ದ ಮೂಲಕ ಅದನ್ನು ಪುನರುಜ್ಜೀವನಗೊಳಿಸಿದ ಯಶೋಗಾಥೆ.
ಲೇಖಕರು: ನಾಗೇಶ್ ಒ. ಎಸ್.

ವನಸುಮ– ದೈವಿಕ ಪ್ರಾಮುಖ್ಯತೆ ಹೊಂದಿರುವ ಬಿಲ್ವ ಮರದ ಸಸ್ಯಶಾಸ್ತ್ರೀಯ ಲಕ್ಷಣಗಳು, ಬೆಳೆಯುವ ವಾತಾವರಣ, ಹೂವು-ಹಣ್ಣುಗಳ ಕೌತುಕ ಹಾಗೂ ಅದರ ವಿವಿಧ ಭಾಗಗಳ (ಎಲೆ, ಬೇರು, ಹೂವು, ಹಣ್ಣು) ಔಷಧೀಯ ಗುಣಗಳ ಪರಿಚಯ.
ಲೇಖಕರು: : ಕ . ಪಿ. ಶಂಕ್ರಪ್ಪ & ಶಾಂತಮ್ಮ ಎಸ್

ವನಬಂಧ – 06 – ಕಾಡು, ನಿಸರ್ಗ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕನ್ನಡ ಪದಬಂಧ ಆಟ.
ಲೇಖಕರು: ಅಕ್ಷತ ಹೆಚ್. ಕೆ.

ಕನ್ನಡದ ಪಕ್ಷಿ ಶಿಕ್ಷಕರ ಕೈಪಿಡಿ – ಅರ್ಲಿ ಬರ್ಡ್ ತಂಡದಿಂದ ಹೊರಬಂದಿರುವ, ಆಟ ಮತ್ತು ಕಲೆ ಆಧಾರಿತ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಪಕ್ಷಿ ಪ್ರಪಂಚವನ್ನು ಪರಿಚಯಿಸುವ ಶಿಕ್ಷಕರ ಕೈಪಿಡಿಯ ವಿವರಣೆ. ಲೇಖಕರು: ಅರ್ಲಿ ಬರ್ಡ್ ತಂಡ

ಕಾಪಾಡುವ ಕರುಳಿನ ಸೂಕ್ಷ್ಮಜೀವಿಗಳ…(ವಿವಿ ಅಂಕಣ) – ನಾವು ಬಳಸುವ ಜಲನಿರೋಧಕ ಹಾಗೂ ಅಂಟುರಹಿತ ವಸ್ತುಗಳಲ್ಲಿರುವ ಶಾಶ್ವತ ರಾಸಾಯನಿಕಗಳನ್ನು (PFAS) ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಹೇಗೆ ಹಾನಿಯಾಗದಂತೆ ದೇಹದಿಂದ ಹೊರಹಾಕುತ್ತವೆ ಎಂಬ ನೂತನ ಸಂಶೋಧನೆಯ ವಿವರಣೆ.
ಲೇಖಕರು: ಜೈಕುಮಾರ್ ಆರ್.

ಕಾನ(ಕವನ) – ಕಾಡಿನ ಸೌಂದರ್ಯ, ಜೀವಸಂಘರ್ಷ ಮತ್ತು ಹಸಿರು ಸಂರಕ್ಷಣೆಯ ಸಂದೇಶವನ್ನು ಸಾರುವ ಕವನ.
ಲೇಖಕರು: ಸೌಭಾಗ್ಯತನಯ ಕೇಶವ .

ಪ್ರಕೃತಿ ಬಿಂಬ – ವಿವಿಧ ಪ್ರಭೇದದ ಹಾವುಗಳಾದ ಕಂಚಿನ ಬೆನ್ನಿನ ಹಾವು (Dendrelaphis pictus), ಹಪ್ಪಾಟೆ ಹಾವು (Craspedocephalus malabaricus), ಹಸಿರಾವು (Ahaetulla nasuta) ಮತ್ತು ಗರಗಸ ಮಂಡಲ (Echis carinatus) ಹಾವುಗಳ ವಾಸಸ್ಥಾನ, ಆಹಾರ ಮತ್ತು ಲಕ್ಷಣಗಳ ಸಂಪೂರ್ಣ ಮಾಹಿತಿ.
ಲೇಖಕರು: ಭಗವತಿ ಬಿ ಎಂ & ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *