ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಮಲೆನಾಡಿನ ಮಳೆ

ಧರೆಗೆ ಇಳಿಯುವ ಮಳೆಯ ಗಮಕದ ರಾಗ, ದುಮ್ಮಿಕ್ಕಿ ಹರಿಯುವ ಜರಿ ಮತ್ತು ಗುಡ್ಡದಿಂದ ಜಾರುವ ಮಳೆಯ ಮೂಲಕ ಮಲೆನಾಡಿನ ಸೌಂದರ್ಯವನ್ನು ಕಟ್ಟಿಕೊಡುವ ಕವನ.

© ಧನರಾಜ್ ಎಂ


ಮಲೆನಾಡಿನ ಮಳೆ
ಧರೆಗೆ ನೀ ಇಳಿಯೇ ಮಳೆ
ಮುಂಗಾರಿನ ಹರುಷದ ಕಳೆ
ದುಮ್ಮಿಕ್ಕಿ ಹರಿಯುವ ಜರಿಯ ಬಳೆ

ಗಮಕದ ರಾಗ ನಿನ್ನ ಮಳೆಯ ಅಲೆ
ಬಳುಕುವ ನೈದಿಲೆಯ ಹನಿಯ ಸೆಲೆ
ಬಳುಕುವ ನೈದಿಲೆಯ ಹನಿಯ ಸೆಲೆ
ಮಧುರ ಸಿಂಚನದ ಮಲೆನಾಡಿನ ಎಲೆ

ಸ್ವರ್ಗದ ಅಮಲಿನ ಮುತ್ತಿನ ಮಳೆ
ಮೈ–ಮನಸ್ಸುಗಳ ತೊಳೆಯುವ ಸ್ವಾತಿ ಮಳೆ
ಗುಡ್ಡ ಮೇಲಿಂದ ಜಾರುವ ಇಳೆಯ ಮಳೆ
ಹೊನ್ನಿನ ಮಲೆನಾಡಿನ ಸೌಂದರ್ಯದ ತೇರಿನ ಮಳೆ

–ಸೌಮ್ಯ ಎಸ್. ಬಿ.
ಮಂಡ್ಯ ಜಿಲ್ಲೆ

              

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *