ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾನನ ಸಿರಿ ಲೇಖನ ಸ್ಪರ್ಧೆ

ಕಾಡು, ವನ್ಯಜೀವಿ, ಪರಿಸರ ಮತ್ತು ಜೀವವೈವಿಧ್ಯದ ಕಥೆಗಳನ್ನು ಕನ್ನಡದಲ್ಲಿ ದಾಖಲಿಸುವ ಬರಹಗಾರರು ಮತ್ತು ಛಾಯಾಗ್ರಾಹಕರಿಗಾಗಿ WCG ಆಯೋಜಿಸುವ ವಾರ್ಷಿಕ ಸ್ಪರ್ಧೆ 'ಕಾನನ ಸಿರಿ 2026'. ಭಾಗವಹಿಸಿ ಅಥವಾ ಪ್ರಾಯೋಜಕರಾಗಿ ಕೈಜೋಡಿಸಿ.
kaanana-siri-2026-poster.jpg

  

    © WCG

‘ಕಾನನ ಸಿರಿ’ – ವೈಲ್ಡ್‌ಲೈಫ್ ಕನ್ಸರ್ವೇಷನ್ ಗ್ರೂಪ್’ (WCG) ಪ್ರತಿವರ್ಷ ಆಯೋಜಿಸುವ ವಾರ್ಷಿಕ ಪ್ರಕೃತಿ ಬರಹ ಹಾಗೂ ಛಾಯಾಚಿತ್ರ ಸ್ಪರ್ಧೆ’.

ನಮ್ಮ ನಾಡಿನ ಕಾಡು, ವನ್ಯಜೀವಿ, ಪರಿಸರ ಹಾಗೂ ಜೀವವೈವಿಧ್ಯದ ಕೌತುಕಗಳನ್ನು ಕನ್ನಡದಲ್ಲೇ ಕಟ್ಟಿಕೊಡುವ ಬರಹಗಾರರಿಗೆ, ಛಾಯಾಗ್ರಾಹಕರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಆಶಯ. ಈ ಮೂಲಕ ಪ್ರಕೃತಿ ಸಂರಕ್ಷಣೆಗಾರರ ಬಳಗವೊಂದನ್ನು ಕಟ್ಟುವುದು ನಮ್ಮ ಉದ್ದೇಶ.
2026ರ ಈ ಆವೃತ್ತಿಯಲ್ಲಿ, ಕನಿಷ್ಠ 150ಕ್ಕೂ ಹೆಚ್ಚು ಹೊಸ ಪ್ರಕೃತಿ ಬರಹಗಳನ್ನು ಓದುಗರ ಮುಂದಿಡುವ ಗುರಿ ನಮ್ಮದು.

ಈ ಮಹತ್ವದ ಪ್ರಯತ್ನಕ್ಕೆ ನಿಮ್ಮ ಸಹಕಾರ, ಬೆಂಬಲ ಅತ್ಯಗತ್ಯ.

ಪ್ರಾಯೋಜಕರಾಗಿ, ಹಿತೈಷಿಗಳಾಗಿ ನಮ್ಮೊಂದಿಗೆ ಕೈಜೋಡಿಸಿ:


₹50,000 — ಕಾನನ ಸಿರಿ ಪ್ರಧಾನ ಪ್ರಾಯೋಜಕರು
₹25,000 — ಕಾನನ ಸಿರಿ ಸಹ ಪ್ರಾಯೋಜಕರು
₹1,000 to 5,000 – ಕಾನನ ಮಿತ್ರ ಮಂಡಳಿ

ನೀವು ನೀಡುವ ನೆರವು ಕನ್ನಡದಲ್ಲಿ ಪರಿಸರ ಮಾಹಿತಿಯನ್ನು ಇನ್ನಷ್ಟು ಆಳವಾಗಿ, ವಿಸ್ತಾರವಾಗಿ ಜನರಿಗೆ ತಲುಪಿಸಲು ನಮಗೆ ಶಕ್ತಿ ತುಂಬುತ್ತದೆ.
ಕಾನನ ಸಿರಿ 2026ರ ಭಾಗವಾಗಲು ಇಚ್ಛಿಸುವಿರಾ?

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

📩 ಇಮೇಲ್: kaanana.mag@gmail.com
📞 ದೂರವಾಣಿ: 9008261066
🌐 ವೆಬ್‌ಸೈಟ್: kaananamag.in

ಕನ್ನಡದ ಕಂಪನ್ನು ಹರಡೋಣ, ಪ್ರಕೃತಿಯ ಸೊಬಗನ್ನು ಸಂಭ್ರಮಿಸೋಣ. ಕಾನನ ಸಿರಿಯೊಂದಿಗೆ ನೀವೂ ಕೈಜೋಡಿಸಿ!

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *