ಕಾನನ ಇ-ಮಾಸಿಕದ ವಾರ್ಷಿಕ ಪರಿಸರ ಲೇಖನ ಮತ್ತು ಛಾಯಾಚಿತ್ರ ಸ್ಪರ್ಧೆ
© WCG
🌿 ಕಾನನ ಸಿರಿ – 2026 🌿
ನಿಸರ್ಗದೊಂದಿಗಿನ ನಿಮ್ಮ ಅನುಭವಗಳನ್ನು ಅಕ್ಷರಗಳಲ್ಲಿ ಹಂಚಿಕೊಳ್ಳಿ ಅಥವಾ ಪ್ರಕೃತಿಯ ಅದ್ಭುತ ಕ್ಷಣಗಳನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಿರಿ!
✍️ ಪರಿಸರ ಲೇಖನ ಸ್ಪರ್ಧೆ
📷 ವನ್ಯಜೀವಿ ಮ್ಯಾಕ್ರೋ ಛಾಯಾಚಿತ್ರ ಸ್ಪರ್ಧೆ
ನಗದು ಬಹುಮಾನಗಳು
🥇 ಪ್ರಥಮ ಬಹುಮಾನ – ₹10,000
🥈 ದ್ವಿತೀಯ ಬಹುಮಾನ – ₹7,500
🥉 ತೃತೀಯ ಬಹುಮಾನ – ₹5,000
🌱 ಆಯ್ಕೆಯಾದ ಲೇಖನಗಳು ಮತ್ತು ಛಾಯಾಚಿತ್ರಗಳು ಕಾನನ ಇ-ಮಾಸಿಕದಲ್ಲಿ ಪ್ರಕಟಗೊಳ್ಳುವ ಅವಕಾಶ.
📧 ಸಲ್ಲಿಸಬೇಕಾದ ಇ-ಮೇಲ್ ವಿಳಾಸ:
kaanana.mag@gmail.com
ಕೊನೆಯ ದಿನಾಂಕ: 5 ಡಿಸೆಂಬರ್ 2026
ನಿಮ್ಮ ಅನುಭವಗಳನ್ನು ಬರೆಯಿರಿ, ಪ್ರಕೃತಿಯ ಸೌಂದರ್ಯವನ್ನು ಸೆರೆಹಿಡಿಯಿರಿ. ಕಾನನ ಸಿರಿಯ ಭಾಗವಾಗಿ!
ಪೂರ್ಣ ಮಾರ್ಗಸೂಚಿಗಳಿಗಾಗಿ ಮುಂದಿನ ಸ್ಲೈಡ್ಗಳನ್ನು ನೋಡಿ.
ಆಯೋಜಕರು: Wildlife Conservation Group (WCG)
ಪರಿಸರ ಲೇಖನ ಸ್ಪರ್ಧೆಯ ಮಾರ್ಗಸೂಚಿಗಳು
ಲೇಖನದ ವಿಷಯಗಳು:
ನನ್ನ ಹಸಿರು ಕಥೆ
ವನ್ಯಜೀವಿ ಸನ್ನಿವೇಶಗಳು
ವನ್ಯಜೀವಿ ಸಮಸ್ಯೆಗಳು ಮತ್ತು ಪರಿಹಾರಗಳು
ಪ್ರಕೃತಿ ಕಲಿಕೆಯ ಚಟುವಟಿಕೆಗಳು
ಪರಿಸರ, ಜನಪದ, ಸಂಸ್ಕೃತಿ ಮತ್ತು ಸಂರಕ್ಷಣೆ
ಸಲ್ಲಿಕೆ ಮಾರ್ಗಸೂಚಿಗಳು:
1. ಲೇಖನವು ಕನಿಷ್ಠ 500 ಹಾಗೂ ಗರಿಷ್ಠ 800 ಪದಗಳ ಮಿತಿಯಲ್ಲಿರಬೇಕು.
2. ಲೇಖನವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಬೇಕು.
3. ಲೇಖನವು ಸ್ವಂತ ಬರಹವಾಗಿರಬೇಕು.
4. ಲೇಖನವನ್ನು Word (.doc/.docx) ಮತ್ತು PDF ಎರಡೂ ರೂಪಗಳಲ್ಲಿ ಕಳುಹಿಸಬೇಕು.
5. ಮುಂದಿನ ಸಂಪರ್ಕಕ್ಕಾಗಿ ಇ-ಮೇಲ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
📧 ಇ-ಮೇಲ್: kaanana.mag@gmail.com
ಇ-ಮೇಲ್ ವಿಷಯ: ಕಾನನ ಸಿರಿ ಲೇಖನ ಸ್ಪರ್ಧೆ – 2026
ಕೊನೆಯ ದಿನಾಂಕ: 5 ಡಿಸೆಂಬರ್ 2026
ಆಯ್ಕೆಯಾದ ಲೇಖನಗಳು ಕಾನನ ಇ-ಮಾಸಿಕದಲ್ಲಿ ಪ್ರಕಟಗೊಳ್ಳುವ ಅವಕಾಶ!
ವನ್ಯಜೀವಿ ಮ್ಯಾಕ್ರೋ ಛಾಯಾಚಿತ್ರ ಸ್ಪರ್ಧೆ
ಪ್ರಕೃತಿಯ ಸೂಕ್ಷ್ಮ ಸೌಂದರ್ಯವನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಿರಿ!
ಮೊದಲ 100 ಅರ್ಹ ಸ್ಪರ್ಧಿಗಳಿಗೆ ಮನ್ನಣೆ ಪತ್ರ.
ಮುಖ್ಯ ಮಾರ್ಗಸೂಚಿಗಳು
1. ನೋಂದಣಿ ಶುಲ್ಕ ₹100. ಒಂದು ನೋಂದಣಿಗೆ ಗರಿಷ್ಠ 3 ಛಾಯಾಚಿತ್ರಗಳನ್ನು ಮಾತ್ರ ಸಲ್ಲಿಸಬಹುದು.
2. ಈ ಸ್ಪರ್ಧೆಗೆ DSLR ಅಥವಾ ಮಿರರ್ಲೆಸ್ ಕ್ಯಾಮೆರಾಗಳಲ್ಲಿ ಸೆರೆಹಿಡಿದ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
3. ಮೊಬೈಲ್ ಫೋನ್, ಕಾಂಪ್ಯಾಕ್ಟ್ ಡಿಜಿಟಲ್ ಕ್ಯಾಮೆರಾ ಅಥವಾ ಇತರ ಸಾಧನಗಳಲ್ಲಿ ಸೆರೆಹಿಡಿದ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
4. ಛಾಯಾಚಿತ್ರಗಳು ನೈಸರ್ಗಿಕ ಆವಾಸಸ್ಥಾನದಲ್ಲಿ ಸೆರೆಹಿಡಿದ ವನ್ಯಜೀವಿಗಳದ್ದಾಗಿರಬೇಕು.
ವನ್ಯಜೀವಿಗಳನ್ನು ಹಿಡಿದು, ಮುಟ್ಟಿ, ಆಮಿಷವೊಡ್ಡಿ ಅಥವಾ ತೊಂದರೆ ನೀಡಿ ಸೆರೆಹಿಡಿದ ಛಾಯಾಚಿತ್ರಗಳನ್ನು ಸಲ್ಲಿಸುವಂತಿಲ್ಲ.
5. ಸ್ವಂತ ಮೂಲ ಛಾಯಾಚಿತ್ರಗಳನ್ನಷ್ಟೇ ಸಲ್ಲಿಸಬೇಕು. ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಿದ ಚಿತ್ರಗಳಿಗೆ ಅವಕಾಶವಿಲ್ಲ.
6. ಮೂಲ ದೃಶ್ಯವನ್ನು ಬದಲಾಯಿಸುವ ಛಾಯಾಚಿತ್ರಗಳ ಎಡಿಟಿಂಗ್, ಚಿತ್ರ ಸಂಯೋಜನೆ (Composite) ಮತ್ತು ಫೋಕಸ್ ಸ್ಟ್ಯಾಕಿಂಗ್ (Focus Stacking) ಅನುಮತಿಯಿಲ್ಲ.
7. ಛಾಯಾಚಿತ್ರದ ಉದ್ದದ ಬದಿಯ ಗರಿಷ್ಠ ಮಿತಿ 2,000 ಪಿಕ್ಸೆಲ್ಗಳು. JPEG/JPG ರೂಪದಲ್ಲಿ ಸಲ್ಲಿಸಬೇಕು.
ಮೂಲ ಪೂರ್ಣ ರೆಸಲ್ಯೂಶನ್ ಛಾಯಾಚಿತ್ರಗಳನ್ನು ತಮ್ಮ ಬಳಿ ಉಳಿಸಿಕೊಂಡಿರಬೇಕು.
ನೋಂದಣಿ ಮತ್ತು ಸಲ್ಲಿಕೆ
8. ₹100 ನೋಂದಣಿ ಶುಲ್ಕ ಪಾವತಿಸಿ ಅಧಿಕೃತ ನೋಂದಣಿ ಪ್ರಕ್ರಿಯೆಯ ಮೂಲಕ ಛಾಯಾಚಿತ್ರಗಳನ್ನು ಸಲ್ಲಿಸಬೇಕು.
ನೋಂದಣಿ ವಿಧಾನ:
ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಗೂಗಲ್ ಫಾರ್ಮ್ ಭರ್ತಿ ಮಾಡಿ.
https://forms.gle/YLdDZHXJCrvqniMw7
ಪಾವತಿಸಿದ ನೋಂದಣಿ ಶುಲ್ಕದ ರಸೀದಿಯನ್ನು ಛಾಯಾಚಿತ್ರಗಳನ್ನು ಕಳುಹಿಸುವ ಇ-ಮೇಲ್ಗೆ ಕಡ್ಡಾಯವಾಗಿ ಲಗತ್ತಿಸಬೇಕು.
ಗಮನಿಸಿ: ಸ್ಪರ್ಧೆಯ ನಿಯಮಗಳನ್ನು ಉಲ್ಲಂಘಿಸುವ ಅಥವಾ ವನ್ಯಜೀವಿಗಳಿಗೆ ತೊಂದರೆ ನೀಡಿ ಸೆರೆಹಿಡಿದ ಛಾಯಾಚಿತ್ರಗಳನ್ನು ಅನರ್ಹಗೊಳಿಸಲಾಗುತ್ತದೆ. ನೋಂದಣಿಗೂ ಮುನ್ನ ಸಂಪೂರ್ಣ ನಿಯಮ ಮತ್ತು ನಿಬಂಧನೆಗಳನ್ನು ಓದಿ ಒಪ್ಪಿಕೊಳ್ಳುವುದು ಕಡ್ಡಾಯ.

ವೈಲ್ಡ್ಲೈಫ್ ಕನ್ಸರ್ವೇಶನ್ ಗ್ರೂಪ್ (WCG) — ಕಾನನ ಪತ್ರಿಕೆಯ ಪ್ರಕಾಶಕರು. ಬೆಂಗಳೂರು ಮೂಲದ ಪ್ರಕೃತಿ ಸಂರಕ್ಷಣಾ ಸಂಸ್ಥೆ.



