ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಮಾಸ ವಿಶೇಷ – ಪುರಗಿ

ಪುರಗಿ ಗಿಡ (Ziziphus oenopolia) ಭಾರತ ಸೇರಿದಂತೆ ಹಲವು ಪ್ರದೇಶಗಳ ಕುರುಚಲು ಕಾಡುಗಳಲ್ಲಿ ಕಂಡುಬರುವ ಮುಳ್ಳಿನ ಗಿಡ. ಸುಂಡ್ಲಿ ಗಿಡ ಮತ್ತು ಕನ್ನರಿ ಎಂದೂ ಕರೆಯಲ್ಪಡುವ ಇದರ ಎಲೆ, ಹೂವು, ಕಪ್ಪು ಹಣ್ಣು, ಗುರುತಿಸುವ ಲಕ್ಷಣಗಳು ಹಾಗೂ ಸಾಂಪ್ರದಾಯಿಕ ಉಪಯೋಗಗಳ ಕುರಿತು ತಿಳಿಯಿರಿ
ಪುರಗಿ ಗಿಡ (Ziziphus oenopolia) – ಮುಳ್ಳಿನ ರೆಂಬೆಗಳು, ಎಲೆಗಳು ಮತ್ತು ಕಪ್ಪು ಹಣ್ಣು

                          ©  ದೀಪಕ್ ಜಿ. ಎನ್., ಪುರಗಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Jackel jujube
ವೈಜ್ಞಾನಿಕ ಹೆಸರು : Zizipus oenopolia

ಸುಂಡ್ಲಿ ಗಿಡ, ಪುರಗಿ ಗಿಡ, ಕನ್ನರಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಗಿಡವು ಭಾರತ, ಚೀನಾ, ಮತ್ತು ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿನ ಕುರುಚಲು ಕಾಡುಗಳಲ್ಲಿ ಕಂಡುಬರುತ್ತವೆ.  ಸುಮಾರು 1.5 ಮೀಟರ್ ಎತ್ತರಕ್ಕೆ ಬೆಳೆಯುವ ಈ ಗಿಡದ ರೆಂಬೆಗಳು ಮುಳ್ಳುಗಳಿಂದ ಕೂಡಿದ್ದು ಪರ್ಯಾಯ ಸರಳ ಎಲೆ ವಿನ್ಯಾಸವನ್ನು ಹೊಂದಿದೆ. ಇದರ ಹೂಗಳು ಹಸಿರು ಬಣ್ಣದಲ್ಲಿರುತ್ತವೆ   ಹಾಗೂ ಹೊಳೆಯುವ ಹಣ್ಣುಗಳು ಕಪ್ಪುಬಣ್ಣದಿಂದ ಕೂಡಿರುತ್ತವೆ. ಹಳ್ಳಿಗಾಡಿನಲ್ಲಿ ಬೆಳೆದ ಬಹುತೇಕ ಜನರು ಈ ಹಣ್ಣಿನ ರುಚಿಯನ್ನು ಸವಿದಿರುತ್ತಾರೆ. ಈ ಗಿಡದ ಬೇರುಗಳನ್ನು ನಂಜು ನಿರೋಧಕ ಮತ್ತು ಹೊಟ್ಟೆಯಲ್ಲಿ ಉರಿ ಮೊದಲಾದವುಗಳಿಗೆ ಆಯುರ್ವೇದ ಔಷಧಿಯಾಗಿ ಬಳಸುತ್ತಾರೆ. ಮಹಾರಾಷ್ಟ್ರದ ಕೊಂಕಣಿ ಜನಾಂಗವು ಈ ಗಿಡದ ಎಲೆಗಳನ್ನು ರುಬ್ಬಿ ಗಾಯಗಳಿಗೆ ಹಚ್ಚುತ್ತಾರೆ.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *