ಮಾಸ ವಿಶೇಷ – ಪುರಗಿ
© ದೀಪಕ್ ಜಿ. ಎನ್., ಪುರಗಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Jackel jujube
ವೈಜ್ಞಾನಿಕ ಹೆಸರು : Zizipus oenopolia
ಸುಂಡ್ಲಿ ಗಿಡ, ಪುರಗಿ ಗಿಡ, ಕನ್ನರಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಗಿಡವು ಭಾರತ, ಚೀನಾ, ಮತ್ತು ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿನ ಕುರುಚಲು ಕಾಡುಗಳಲ್ಲಿ ಕಂಡುಬರುತ್ತವೆ. ಸುಮಾರು 1.5 ಮೀಟರ್ ಎತ್ತರಕ್ಕೆ ಬೆಳೆಯುವ ಈ ಗಿಡದ ರೆಂಬೆಗಳು ಮುಳ್ಳುಗಳಿಂದ ಕೂಡಿದ್ದು ಪರ್ಯಾಯ ಸರಳ ಎಲೆ ವಿನ್ಯಾಸವನ್ನು ಹೊಂದಿದೆ. ಇದರ ಹೂಗಳು ಹಸಿರು ಬಣ್ಣದಲ್ಲಿರುತ್ತವೆ ಹಾಗೂ ಹೊಳೆಯುವ ಹಣ್ಣುಗಳು ಕಪ್ಪುಬಣ್ಣದಿಂದ ಕೂಡಿರುತ್ತವೆ. ಹಳ್ಳಿಗಾಡಿನಲ್ಲಿ ಬೆಳೆದ ಬಹುತೇಕ ಜನರು ಈ ಹಣ್ಣಿನ ರುಚಿಯನ್ನು ಸವಿದಿರುತ್ತಾರೆ. ಈ ಗಿಡದ ಬೇರುಗಳನ್ನು ನಂಜು ನಿರೋಧಕ ಮತ್ತು ಹೊಟ್ಟೆಯಲ್ಲಿ ಉರಿ ಮೊದಲಾದವುಗಳಿಗೆ ಆಯುರ್ವೇದ ಔಷಧಿಯಾಗಿ ಬಳಸುತ್ತಾರೆ. ಮಹಾರಾಷ್ಟ್ರದ ಕೊಂಕಣಿ ಜನಾಂಗವು ಈ ಗಿಡದ ಎಲೆಗಳನ್ನು ರುಬ್ಬಿ ಗಾಯಗಳಿಗೆ ಹಚ್ಚುತ್ತಾರೆ.