ಮಾಸ ವಿಶೇಷ – ಹಿಪ್ಪೆ ಮರ

ಮಾಸ ವಿಶೇಷ – ಹಿಪ್ಪೆ ಮರ

                         © ಸಂದೀಪ್, ಹಿಪ್ಪೆ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian butter tree
ವೈಜ್ಞಾನಿಕ ಹೆಸರು : Maduva longifolia

ಹಿಪ್ಪೆ ಮರವು ಭಾರತೀಯ ಉಷ್ಣವಲಯದ ಮರವಾಗಿದ್ದು. ಭಾರತ, ನೇಪಾಳ, ಮ್ಯಾನ್ಮಾರ್ ಮತ್ತು ಶ್ರೀಲಂಕಾ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ವೇಗವಾಗಿ ಬೆಳೆಯುವ ಮರವಾಗಿದ್ದು, ಸರಿ ಸುಮಾರು 20 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಈ ಮರದ ತೊಗಟೆಯು ಒರಟಾಗಿದ್ದು, ಬೂದು ಮತ್ತು ತಿಳಿಕಂದು ಬಣ್ಣದಿಂದ ಕೂಡಿರುತ್ತದೆ. ತೊಗಟೆಯ ಮೇಲೆ ಲಂಬವಾದ ಬಿರುಕುಗಳನ್ನು ಕಾಣಬಹುದು. ಇದು ಸರಳ ಪರ್ಯಾಯ ಎಲೆ ವಿನ್ಯಾಸವನ್ನು ಹೊಂದಿದ್ದು, ಕಿರುಕೊಂಬೆಗಳ ಕೊನೆಯಲ್ಲಿ ಎಲೆಗಳು ಗುಂಪಾಗಿರುತ್ತವೆ. ಮರದ ಚಿಗುರೆಲೆಗಳು ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಈ ಮರವು ಸಾಮಾನ್ಯವಾಗಿ ಫೆಬ್ರವರಿಯಿಂದ ಏಪ್ರಿಲ್ ವರೆಗೆ ಎಲೆಗಳನ್ನು ಉದುರಿಸುತ್ತದೆ, ಆ ಸಮಯದಲ್ಲಿ ಕಸ್ತೂರಿ ಪರಿಮಳ ಸೂಸುವ ಹೂಗಳನ್ನು ಕಾಣಬಹುದು. ಕಿರು ಕೊಂಬೆಗಳ ತುದಿಯಲ್ಲಿ ಕಡು ಬೂದು ಬಣ್ಣದ  12 ಅಥವಾ ಅದಕ್ಕಿಂತ ಹೆಚ್ಚು ಹೂ ಗೊಂಚಲುಗಳು ನೇತಾಡುತ್ತವೆ. ಹೂಗಳ ಗೊಂಚಲುಗಳೊಂದಿಗೆ ಕೆಂಪು ಬಣ್ಣದ ಎಲೆಗಳು ಬಹಳ ಆಕರ್ಷಕವಾಗಿ ಕಾಣುತ್ತವೆ. ಹೂವುಗಳ ತೊಟ್ಟು ಹಸಿರು ಅಥವಾ ಗುಲಾಬಿ ಬಣ್ಣವನ್ನು ಹೊಂದಿದ್ದು, ರೋಮ ಗಳಿಂದ ಕೂಡಿ ಸುಮಾರು 5 ಸೆಂಟಿಮೀಟರ್ ಉದ್ದವಿರುತ್ತವೆ. ಹಸಿರು ಬಣ್ಣದ ಹಣ್ಣುಗಳು 3 ರಿಂದ 5 ಸೆಂಟಿಮೀಟರ್ ಉದ್ದವಿರುತ್ತವೆ.  ಪ್ರತಿ ಹಣ್ಣಿನೊಳಗೆ 2 ರಿಂದ 3 ಬೀಜಗಳನ್ನು ಹೊಂದಿರುತ್ತದೆ.  ಮರದ ಬಹುತೇಕ ಭಾಗಗಳು ಆಯುರ್ವೇದ ಔಷಧಿಯಲ್ಲಿ ಉಪಯೋಗಿಸುತ್ತಿದ್ದು, ಮರದ ತೊಗಟೆಯನ್ನು ಕುಷ್ಟರೋಗ ಗುಣಪಡಿಸಲು ಮತ್ತು ಗಾಯಗಳನ್ನು ವಾಸಿ ಮಾಡಲು ಬಳಸುತ್ತಾರೆ. ಮರದ ಹೂವುಗಳನ್ನು ಕೆಮ್ಮು, ಪಿತ್ತಸಾರ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ಉಪಯೋಗಿಸುತ್ತಾರೆ.

Print Friendly, PDF & Email
Spread the love
error: Content is protected.