ಮಾಸ ವಿಶೇಷ -ಬಿಳಿ ಬಸುರಿ

ಮಾಸ ವಿಶೇಷ -ಬಿಳಿ ಬಸುರಿ

                         © ನಾಗೇಶ್ ಓ. ಎಸ್. ಬಿಳಿ ಬಸುರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: South Indian Fig
ವೈಜ್ಞಾನಿಕ ಹೆಸರು : : Ficus tsjahela

          ಬಸರಿಮರ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಮರವು, ಭಾರತ ಮತ್ತು ಶ್ರೀಲಂಕಾ ದೇಶಗಳ ಒಣ ಶುಷ್ಕ ಮತ್ತು ಕುರುಚಲು ಕಾಡುಗಳಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಈ ಮರದ ಬೀಜ ಪ್ರಸರಣೆ ಹೆಚ್ಚಾಗಿ ಪಕ್ಷಿಗಳು ಮಾಡುವುದರಿಂದ ಬಹುತೇಕ ಬೀಜಗಳು ಇತರೆ ಮರಗಳ ಕೊಂಬೆಗಳ ಮೇಲೆ ಪ್ರಸರಣೆಗೊಂಡು ಪ್ರಾರಂಭದಲ್ಲಿ ಇದು ಪರಾವಲಂಬಿ ಗಿಡದಂತೆ ಇದ್ದು, ನಂತರದಲ್ಲಿ ಸ್ವತಂತ್ರ ಮರವಾಗಿ ಬೆಳೆಯುತ್ತದೆ. ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರದ ತೊಗಟೆಯು ಗಾಢ ಕಂದು ಬಣ್ಣದಿಂದ ಕೂಡಿದ್ದು, ಬೆಳೆಯುತ್ತಿರುವ ಕಿರು ಕೊಂಬೆಗಳು ಕೆಂಪು ಬಣ್ಣದಲ್ಲಿದ್ದು, ಗುಂಡಾಗಿರುತ್ತವೆ. ಎಲೆಗಳು ಸರಳ ವಿನ್ಯಾಸವನ್ನು ಹೊಂದಿದ್ದು, ಪರ್ಯಾಯ ವ್ಯವಸ್ಥೆಯನ್ನು ಹೊಂದಿರುತ್ತವೆ. ಬಹುತೇಕ ಎಲ್ಲಾ ಫೈಕಸ್ (ficus)ಪ್ರಭೇದದ ಮರಗಳಲ್ಲಿ ನಾವು ಹೂಗಳನ್ನು ನೇರವಾಗಿ ನೋಡಲಾಗುವುದಿಲ್ಲ. ಅಂಜೂರ, ಅತ್ತಿ ಹಣ್ಣುಗಳಂತೆಯೇ ಬಸರಿ ಮರದಲ್ಲಿಯೂ ಹಣ್ಣಿನ ಒಳಗೆ ಹೂಗಳು ಪುಷ್ಪಮಂಜರಿ ಅಥವಾ ಇನ್ಫ್ಲೋರಸೆನ್ಸ್ ಅಂದರೆ ಹೂಗಳು ಗೊಂಚಲು ಗೊಂಚಲಾಗಿ ಇರುತ್ತವೆ. ಹಣ್ಣುಗಳು ಹಸಿರು ಬಣ್ಣದಲ್ಲಿದ್ದು, ರೆಂಬೆಗೆ ಅಂಟಿಕೊಂಡಂತೆ ಗೊಂಚಲುಗಳಲ್ಲಿ ಇರುತ್ತವೆ. ಇವುಗಳಿಗೆ ಯಾವುದೇ ರೀತಿಯ ತೊಟ್ಟುಗಳು ಇರುವುದಿಲ್ಲ. ಮರದ ತೊಗಟೆಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ. ಚರ್ಮದ ಸಮಸ್ಯೆ, ಅತಿಸಾರ, ರಕ್ತ ಶುದ್ಧಿ ಮೊದಲಾದ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ.

Print Friendly, PDF & Email
Spread the love
error: Content is protected.