ಕಾನನ

ನಿಸರ್ಗದೆಡೆಗೆ ಪಯಣ

ಗಾಳಿ ಮಳೆ ಬಿಸಿಲು ಚಳಿ ಎಲ್ಲ ನಿನ್ನೊಳಿರೆ
ವಿಸ್ಮಯಗಳದೆಷ್ಟು ನಿನ್ನ ಕೈ ಸೆರೆ
ಏನಿಲ್ಲ ಏನುಂಟು ಅರಿಯಲು ನಾ ಸೋತೆ ನೀರೆ
ಸಹಿಸಲಸಾಧ್ಯ ನೀ ಕೋಪಗೊಂಡರೆ…

ವನರಾಶಿ ಹಳ್ಳ ಕೊಳ್ಳ ನದಿ ಸಾಗರ ಗುಡ್ಡ ಬೆಟ್ಟ ಗಿರಿ ಶಿಖರ ಇತರೆ
ಯಾವುದೆಲ್ಲ ನಿನ್ನ ಸರಕು ಎಲ್ಲಕೂ ನೀ ಉಸಿರೆ
ನಿನ್ನ ನೋಡ ಬಂದರೇನೆ ಚಂದ್ರಮ ಚುಕ್ಕಿ ತಾರೆ
ನೋಡಿದಷ್ಟು ಮುದವ ಕೊಡುವ ನೀನು ಸುಮಧುರೆ…

ಕಾಲಕ್ಕೆ ತಕ್ಕಂತೆ ರೂಪುಗೊಳುವ ಅಪ್ಸರೆ
ಹಕ್ಕಿಗಳ ಕಲರವದಿ ಝರಿಯ ಜುಳು ಜುಳು ನಾದದಿ ಹೂಗಳು ನಗುತಿರೆ
ಮೈಮನ ತಣಿಸುವ ಸೊಬಗಿನ ಸುಂದರೆ
ನಿನ್ನೊಡಲಲಿ ಜನ್ಮವ ಪಡೆದವರದೆಷ್ಟು? ನಿನಗೆ ಸರಿಸಾಟಿ ಯಾರೆ?…

-ಪ್ರತಿಭಾ ಪ್ರಶಾಂತ.
ಉತ್ತರ ಕನ್ನಡ ಜಿಲ್ಲೆ 


ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.