ಕಾನನ

ನಿಸರ್ಗದೆಡೆಗೆ ಪಯಣ

ವಲಸೆ ಹಕ್ಕಿ

ಮಾರುತಗಳ ಭೇದಿಸಿ
ಹಿಮ ಪರ್ವತಗಳದಾಟಿ
ಸಾಗರ ಸರೋವರಗಳ ಹಾರಿ
ಹಗಲು ರಾತ್ರಿಗಳೆನ್ನದೆ ಸಾಗ್ತೀಗಕ್ಕಿ
ಪ್ರೇಮ ಪಯಣ ವಿಹಾರಿ

ನವ ಆವಸ ಶೋಧಿ
ಖಗೋಳ ನಕ್ಷ ಮಾರ್ಗಸುಚಿ
ಹೊಸ ತಲೆಮಾರಿನ ಪಾಲಾಯನಿ
ಕನಸಿನ ತಾಣಗಳಿಗಾಗಿ

ಸಂಕಲ್ಪ ತೊಟ್ಟ ಸಂಕುಲಿ
ಸಂತಾನ ವಲಸೆಹಕ್ಕಿಯಲಿ
ಈ ಬಾಳ ರಮ್ಯ ಸಿರಿ

ವಿಕಾಶ ಪರ್ವರೂಪಿ
ವಿಲಾಸಿ ಮನೋಹರಿ
ಋತು ವಸಂತಗಳ ಭೋಗಿ
ಹಾಡಿತಿಂದು ! ವಲಸೆಹಕ್ಕಿ

ಕೃಷ್ಣ ನಾಯಕ್
ರಾಮನಗರ ಜಿಲ್ಲೆ

ಕಾನನದ ದನಿ ಹರಡಿ
error: Content is protected.