ಕಾನನ

ನಿಸರ್ಗದೆಡೆಗೆ ಪಯಣ

ನೀವೂ ಕಾನನಕ್ಕೆ ಬರೆಯಬಹುದು

© ಅವಿನಾಶ್ ಜಿ. (JLR)

ತನ್ನ ಗಾಂಭೀರ್ಯ, ಕ್ರೌರ್ಯ, ಶಕ್ತಿಯಿಂದಾಗಿ ಸಿಂಹವನ್ನು “ಕಾಡಿನ ರಾಜ” ಎಂದು ಕರೆಯಲಾಗುತ್ತದೆ. ಸಿಂಹಗಳು ದಟ್ಟವಾದ ಅರಣ್ಯದಲ್ಲಿ ಇರುವುದಿಲ್ಲ. ಬದಲಿಗೆ ಕಲ್ಲು ಬಂಡೆಗಳು, ಹುಲ್ಲುಗಾವಲು ಹಾಗೂ ಕುರುಚಲು ಗಿಡಗಳ ಕಾಡಿನಲ್ಲಿ ವಾಸಿಸುತ್ತವೆ. ಭಾರತದಲ್ಲಿ ಗುಜರಾತಿನ ಗಿರ್ ಅರಣ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಗುಂಪಿನಲ್ಲೇ ಇರುತ್ತವೆ. ಒಂದು ಗುಂಪಿನಲ್ಲಿ ಸುಮಾರು 15 ಸಿಂಹಗಳಿರುತ್ತವೆ. ಇವುಗಳು ಸಾಮಾನ್ಯವಾಗಿ ಹಗಲಿನಲ್ಲಿ ಮಲಗಿದ್ದು, ರಾತ್ರಿಯ ವೇಳೆ ಬೇಟೆಯಾಡುತ್ತವೆ. ಹೆಚ್ಚಾಗಿ ಹೆಣ್ಣು ಸಿಂಹಗಳು ಬೇಟೆಯಾಡುತ್ತವೆ. ಸಿಂಹಿಣಿಗಳು ಗರ್ಭಧರಿಸಿದ ಮೂರು ತಿಂಗಳಲ್ಲಿ ಮಕ್ಕಳಿಗೆ ಜನ್ಮ ನೀಡುತ್ತವೆ. ಒಂದು ಸಿಂಹದ ಜೀವಿತಾವಧಿ 15-16 ವರ್ಷವಷ್ಟೇ. ಅರಣ್ಯ ನಾಶ, ಕಾಡು ಪ್ರಾಣಿಗಳ ಬೇಟೆ ಈ ಎಲ್ಲಾ ಕಾರಣಗಳಿಂದಾಗಿ ಕಾಡಿನ ರಾಜ ಎಂದು ಕರೆಯಲ್ಪಡುವ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕುಸಿಯುತ್ತಿರುವ ಸಿಂಹಗಳ ಸಂಖ್ಯೆಯ ಕುರಿತು ಜಾಗೃತಿ ಮೂಡಿಸಲು “ವಿಶ್ವ ಸಿಂಹ ದಿನ” ವನ್ನು ಆಗಸ್ಟ್ 10 ರಂದು ಆಚರಿಸಲಾಗುವುದು. ಇದೇ ರೀತಿಯ ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳಲು ನೀವು ಕೂಡ ಕಾನನಕ್ಕೆ ಬರೆಯಬಹುದು.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.