ಕಾನನ

ನಿಸರ್ಗದೆಡೆಗೆ ಪಯಣ

ನೀವೂ ಕಾನನಕ್ಕೆ ಬರೆಯಬಹುದು

 ಪೆಂಗ್ವಿನ್‌‌ಗಳು ಸಾಮಾನ್ಯವಾಗಿ ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಕಂಡುಬರುವ ಜಲಜೀವಿಗಳು. ಇವು ಹಾರಲಾರದ ಪಕ್ಷಿಗಳ ಗುಂಪಿಗೆ ಸೇರುತ್ತವೆ. ಪೆಂಗ್ವಿನ್‌‌ಗಳು ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿರುತ್ತವೆ. ಅವುಗಳ ರೆಕ್ಕೆಗಳು ಈಜುಗೈಗಳಾಗಿ ಮಾರ್ಪಟ್ಟಿವೆ. ಪೆಂಗ್ವಿನ್‌‌ಗಳು ತಮ್ಮ ಜೀವಿತಾವಧಿಯ ಸುಮಾರು ಅರ್ಧಭಾಗವನ್ನು ಭೂಮಿಯ ಮೇಲೆ ಕಳೆದರೆ ಇನ್ನುಳಿದರ್ಧ ಭಾಗವನ್ನು ಮಹಾಸಾಗರಗಳಲ್ಲಿ ಕಳೆಯುತ್ತವೆ. ಇವು ಸಣ್ಣ ಪುಟ್ಟ ಕಡಲ ಜೀವಿಗಳನ್ನು ತಿಂದು ಬದುಕುತ್ತವೆ. ದಕ್ಷಿಣ ಸಾಗರಗಳಲ್ಲಿ ಮೀನುಗಾರಿಕೆಯಿಂದ ಪೆಂಗ್ವಿನ್ಗಳು ತಿನ್ನುವಂತಹ ಮೀನುಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದೆ. ಇದರಿಂದ ಪೆಂಗ್ವಿನ್ಗಳ ನಡುವೆ ಆಹಾರಕ್ಕಾಗಿ ಸ್ಪರ್ಧೆ ಉಂಟಾಗಿದೆ. ಮೀನುಗಾರಿಕೆ ಬಲೆಗಳಲ್ಲಿ ಸಿಲುಕಿ ಎಷ್ಟೋ ಪೆಂಗ್ವಿನ್ಗಳು ಜೀವ ಕಳೆದುಕೊಳ್ಳುತ್ತಿವೆ. ಪೆಂಗ್ವಿನ್ಗಳ ಜೀವನವು ಹೆಚ್ಚು ಸಮುದ್ರದ ಹಿಮದ ಮೇಲೆ ಅವಲಂಬಿತವಾಗಿರುವುದರಿಂದ, ಜಾಗತಿಕ ತಾಪಮಾನದ ಏರಿಕೆಯು ಪೆಂಗ್ವಿನ್ಗಳ ಉಳಿವಿನ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ. “ವಿಶ್ವ ಪೆಂಗ್ವಿನ್‌ ದಿನ” ವನ್ನು ಏಪ್ರಿಲ್‌ 25 ರಂದು ಆಚರಿಸಲಾಗುತ್ತದೆ. ಪೆಂಗ್ವಿನ್ ಹಾಗೂ ಇತರೆ ಜೀವಿಗಳ ಬಗ್ಗೆ ನೀವು ಕಾನನಕ್ಕೆ ಬರೆಯಬಹುದು.

 ಇದೇ ರೀತಿಯ ಮಾಹಿತಿಗಳನ್ನು ನೀಡಲು ನೀವೂ ಕಾನನಕ್ಕೆ ಬರೆಯಬಹುದು.  ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ವಿಶೇಷ ಮನವಿ: ಕಾನನ ಪತ್ರಿಕೆಯು ಯುವ ಜನರಲ್ಲಿ, ಮಕ್ಕಳಲ್ಲಿ ಪರಿಸರದ ಪಸರನ್ನು ಹರಡಲು ಮತ್ತು ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಲು ಇರುವ ಮುಕ್ತ ವೇದಿಕೆಯಾಗಿದೆ.  ಈ ಪತ್ರಿಕೆಯ ವಿನ್ಯಾಸ, ವಿಷಯವನ್ನು ಬದಲಿಸದೆ pdf ಪ್ರತಿಯನ್ನು ಯಥಾಸ್ಥಿತಿಯಲ್ಲಿ ಯಾರು ಬೇಕಾದರೂ ಪ್ರಿಂಟ್ ಮಾಡಿಸಿ ಓದಲು ಬಳಸಬಹುದು ಅಥವಾ ಪರಿಸರದ ಬಗ್ಗೆ ಅರಿವು ಮೂಡಿಸಲು ಶಾಲೆಗಳಿಗೆ ನೀಡಬಹುದು.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.