ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನೀವೂ ಕಾನನಕ್ಕೆ ಬರೆಯಬಹುದು

ಪ್ರಕೃತಿಯ ಪ್ರತಿಯೊಂದು ಜೀವ, ಮರ, ಕಾಡು, ನದಿ ಒಂದು ಕಥೆಯನ್ನು ಹೇಳುತ್ತದೆ - ಆ ಕಥೆಗಳನ್ನು ದಾಖಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಕೃತಿ ಅವಲೋಕನ, ವನ್ಯಜೀವಿ ಅನುಭವ, ಪರಿಸರ ಸಂರಕ್ಷಣೆ, ಪ್ರವಾಸ ಕಥನ ಬರೆಯುವವರಿಗೆ ಕಾನನ ಮಾಸಿಕದಿಂದ ಆಹ್ವಾನ - ಕಳುಹಿಸುವ ವಿಳಾಸ ಮತ್ತು ವಿಧಾನ ಇಲ್ಲಿದೆ.

  

    © ಧನರಾಜ್ ಎಂ.

          ಪ್ರಪಂಚದ ಅನೇಕ ಭಾಗಗಳಲ್ಲಿ ಮೀನು ಪ್ರಮುಖ ಆಹಾರ ಮತ್ತು ಜೀವನೋಪಾಯದ ಮೂಲವಾಗಿದೆ. ಮೀನುಗಾರಿಕೆ ಕೇವಲ ಒಂದು ಉದ್ಯಮವಲ್ಲ. ಸಮುದ್ರ, ನದಿಗಳು, ಕೆರೆಗಳು ಮತ್ತು ಇತರ ಜಲಮೂಲಗಳೊಂದಿಗೆ ಅನೇಕ ಮೀನುಗಾರ ಸಮುದಾಯಗಳ ಬದುಕು ಮತ್ತು ಸಂಸ್ಕೃತಿ ತಲೆತಲಾಂತರಗಳಿಂದ ಬೆಸೆದುಕೊಂಡಿದೆ. ಆದರೆ ಅತಿಯಾದ ಮತ್ತು ಅವೈಜ್ಞಾನಿಕ ಮೀನುಗಾರಿಕೆ, ಮೀನುಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುವ ಚಟುವಟಿಕೆಗಳು, ಪ್ಲಾಸ್ಟಿಕ್ ಹಾಗೂ ಕೈಗಾರಿಕಾ ತ್ಯಾಜ್ಯದಿಂದ ಉಂಟಾಗುವ ಜಲಮಾಲಿನ್ಯ, ತೈಲ ಸೋರಿಕೆ ಮತ್ತು ಹವಾಮಾನ ಬದಲಾವಣೆಯಂತಹ ಕಾರಣಗಳು ಜಲಚರ ಜೀವವೈವಿಧ್ಯಕ್ಕೆ ದೊಡ್ಡ ಸವಾಲಾಗಿವೆ. ಕೆಲವು ಜಲಮೂಲಗಳಲ್ಲಿ ಪೋಷಕಾಂಶಗಳ ಅತಿಯಾದ ಸಂಗ್ರಹದಿಂದ ಪಾಚಿಗಳ ಅತಿವೃದ್ಧಿ ಉಂಟಾಗಿ ನೀರಿನಲ್ಲಿ ಆಮ್ಲಜನಕದ ಕೊರತೆಯೂ ಉಂಟಾಗಬಹುದು. ಇವೆಲ್ಲವೂ ಮೀನುಗಳ ಸಂಖ್ಯೆ ಮತ್ತು ಅವುಗಳ ಆವಾಸಸ್ಥಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಪ್ರತಿವರ್ಷ ನವೆಂಬರ್ 21ರಂದು ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸಲಾಗುತ್ತದೆ. ಸುಸ್ಥಿರ ಮೀನುಗಾರಿಕೆಯ ಮಹತ್ವವನ್ನು ಜನರಿಗೆ ತಿಳಿಸುವುದು, ಮೀನು ಸಂಪತ್ತನ್ನು ಸಂರಕ್ಷಿಸುವುದು, ಮೀನುಗಾರ ಸಮುದಾಯಗಳ ಜೀವನೋಪಾಯವನ್ನು ಬೆಂಬಲಿಸುವುದು ಮತ್ತು ಜಲ ಪರಿಸರ ವ್ಯವಸ್ಥೆಗಳ ಆರೋಗ್ಯವನ್ನು ಕಾಪಾಡುವುದು, ಈ ದಿನದ ಪ್ರಮುಖ ಆಶಯಗಳಾಗಿವೆ. ವೈಜ್ಞಾನಿಕ ಮೀನುಗಾರಿಕಾ ವಿಧಾನಗಳನ್ನು ಅಳವಡಿಸಿಕೊಳ್ಳುವುದು, ಅತಿಯಾದ ಮೀನುಗಾರಿಕೆಯನ್ನು ನಿಯಂತ್ರಿಸುವುದು, ಜಲಮೂಲಗಳನ್ನು ಮಾಲಿನ್ಯದಿಂದ ರಕ್ಷಿಸುವುದು ಮತ್ತು ಮೀನುಗಳ ಸಂತಾನೋತ್ಪತ್ತಿಗೆ ಅಗತ್ಯವಾದ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇಂದು ನಾವು ಜಲಮೂಲಗಳನ್ನು ಎಷ್ಟು ಜವಾಬ್ದಾರಿಯಿಂದ ಬಳಸುತ್ತೇವೆಯೋ, ನಾಳೆ ಅದೇ ಜಲಮೂಲಗಳು ನಮಗೆ ಮತ್ತು ಮುಂದಿನ ಪೀಳಿಗೆಗಳಿಗೆ ಅಷ್ಟೇ ಸಮೃದ್ಧವಾದ ಜೀವಸಂಪತ್ತನ್ನು ನೀಡಲಿವೆ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. 


ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com 

ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *