ವನಬಂಧ-13
ಎಡದಿಂದ ಬಲಕ್ಕೆ:
- ರಾಟೆಯೂ ಇಲ್ಲ ಹವಳವೂ ಇಲ್ಲ ಆದರೆ ಚಂದದ ಪುಟ್ಟ ಪಕ್ಷಿ (4)
2. ಈ ಬೆನ್ನುಮೂಳೆಯ ಜೀವಿಗಳಿಗೂ ಶೇರು ವ್ಯವಹಾರಕ್ಕೂ ಸಂಬಂಧವಿಲ್ಲ (4)
3. ಗೌಜು ಗದ್ದಲ ಮಾಡುವುದೇ ಈ ಹಕ್ಕಿಗಳ ಕೆಲಸ (5)
4. ಒಂಬತ್ತು ಬಣ್ಣಗಳ ಸುಂದರಾಂಗ ಪಕ್ಷಿ (4)
5. ಈ ಹಕ್ಕಿ ಹಾವಿನಂತೆ ಬಾಗಿ ಬಳುಕಿದರೂ ತಿನ್ನುವುದು ಮಾತ್ರ ಮೀನುಗಳನ್ನು (3)
7. ಹಾರಾಟಕ್ಕೆ ಹೋಗಿ ಬರಲು ಕೆಂಪು ಬಣ್ಣ ಬೇಕೇ ಬೇಕು (4)
8. ಬೇಟೆಯಾಡುವ ವರ ಇಲ್ಲ ಈ ಹಕ್ಕಿಗೆ (4)
9. ಎಲ್ಲ ಜಾತಿಯ ಸಸ್ಯಗಳಿಗೆ ಇರುವ ಮೂಲ ಅಂಗ (2)
ಮೇಲಿನಿಂದ ಕೆಳಕ್ಕೆ:
- ಗುಟುರು ಹಾಕುವುದೇ ಈ ಸಸ್ತನಿಯ ಗುಣ (3)
- ಕಳೆಗುಂದಿದ ಮಂಗ ಅಲ್ಲ ಆದರೆ ಸುಂದರ ಪಕ್ಷಿ (3)
- ಕೆರೆಗಳಲ್ಲಿ ತಾವರೆ ಗಿಡದ ಎಲೆಗಳ ಮೇಲೆ ನಡೆವ ಈ ಹಕ್ಕಿ ಯಾವಾಗಲೂ ಜತನದಿಂದ ವರ್ತಿಸುತ್ತದೆ. (3)
- ಗದ್ದೆಯಲ್ಲಿ ಗೊರ ಗೊರ ಸದ್ದು ಮಾಡುವ ಕಂದು ಬಿಳಿ ಬಣ್ಣದ ಪಕ್ಷಿ (5)
- ಪಕ್ಷಿಗಳ ಈ ಮೂಲಗುಣ ವಿಮಾನಕ್ಕೂ ಇದೆ (3)
- ಕನಕಾಂಬರ ಅಲ್ಲ ಆಕಾಶ (3)
- ತಾವರೆ ಹೂವಿನ ಮುಖ ಕೆಂಪಾಗಿ ಅರಳಿದೆ (4)
- ಪ್ರಾಣಿಗಳು ಆಹಾರಕ್ಕಾಗಿ ಕೊಲ್ಲುವ ಈ ಕೆಲಸ ತಲೆ ಕೆಳಗಾಗಿದೆ. (2)
ವನಬಂಧ – 12ರ ಉತ್ತರಗಳು
ಎಡದಿಂದ ಬಲಕ್ಕೆ
1. ಚಂಡಮಾರುತ 2. ಕಿರುಬ 3. ಕಡವೆ 4. ಇದ್ದಿಲು 5. ಕೆಂಜಿಗ 6. ಕಾಡುಕುರಿ 7. ಚಾವಟಿ 8. ಕರಟ
ಮೇಲಿನಿಂದ ಕೆಳಕ್ಕೆ
1. ಯಡಕುಮರಿ 2. ಕಿರಾತಕ 3. ಬಕಪಕ್ಷಿ 4. ಇರುವೆ 5. ಕೆಂದಳಿಲು 6. ಕಾಟಿ 7. ಚಾತಕ 8. ಕುದುರೆ
“ಈ ಮೇಲಿನ ವನಬಂಧವನ್ನು ಉತ್ತರಿಸಿ ನಮ್ಮ ವಿಳಾಸಕ್ಕೆ ಇದೇ ತಿಂಗಳ ದಿನಾಂಕ 30ರ ಒಳಗೆ ಕಳುಹಿಸಿ ಕೊಟ್ಟವರಿಗೆ ಪುಟ್ಟ ಬಹುಮಾನ ನೀಡಲಾಗುವುದು. (ವಿಳಾಸಕ್ಕಾಗಿ ನೀವೂ ಕಾನನಕ್ಕೆ ಬರೆಯಬಹುದು ಅಂಕಣವನ್ನು ಓದಿ)”

– ಸುಬ್ಬು ಬಾದಲ್
ಬೆಂಗಳೂರು ಜಿಲ್ಲೆ



