ಧರಣಿ ಈಗ ತರುಣಿ

ಧರೆಯ ಮೇಲೆ ವರುಣ
ಹರಿಸಿದ ತನ್ನ ಕರುಣ
ಈಗ ಹಸಿರುಟ್ಟ ಧರಣಿ
ನವ ತಾರುಣ್ಯದ ತರುಣಿ
ಧರೆಯ ಮೇಲೆ ವರುಣ
ಹರಿಸಿದ ತನ್ನ ಕರುಣ
ಈಗ ಹಸಿರುಟ್ಟ ಧರಣಿ
ನವ ತಾರುಣ್ಯದ ತರುಣಿ
ಭೂಮಿ – ಬಾನಿನ ಬಾಂಧವ್ಯಕೆ
ತಂಪನೀಯುವ ಮಳೆಯೇ ಸಾಕ್ಷಿ
ಮಳೆಹನಿಯಲಿ ಮಿಂದು
ಕಲರವವ ಹೊರಡಿಸಿತು ಪಕ್ಷಿ
ವರ್ಷಾಧಾರೆಯ ಆಗಮನದಿ
ಮೈ – ಮನವು ತಂಪು
ಬಿದ್ದ ಮಳೆಯ ರಭಸಕೆ
ಭೂಮಿ ತುಂಬಾ ಮಣ್ಣಿನ ಕಂಪು
– – ಜನಾರ್ದನ ಎಂ. ಎನ್. ಗೊರ್ಟೆ.
ಭಟ್ಕಳ, ಉತ್ತರ ಕನ್ನಡ ಜಿಲ್ಲೆ