ಮಳೆಯ ರುದ್ರನರ್ತನ
ಮಳೆಯ ರುದ್ರನರ್ತನ
ಗಗನದಿ ಕಾರ್ಮೊಡಗಳ ಆರ್ಭಟ
ಬಲು ಜೋರಾಗಿರಲು
ಸುರಿ ಸುರಿದು ಬಂತು ಮಳೆ
ಅಸ್ತವ್ಯಸ್ತವಾಯಿತು ಇಳೆ
ಭೋರ್ಗರೆದು ಹರಿಯಿತು ಹೊಳೆ
ಸರ್ವನಾಶವಾದವು ಸೊಂಪಾಗಿದ್ದ ಬೆಳೆ
ವಿಚಲಿತಗೊಂಡಿತು ಜೀವ ಕಳೆ
ಸರಿಹೋದಿತೇ ಇದು ಇಂದು ನಾಳೆ
ಎಂದೆಂದು ಕಂಡು ಕೇಳರಿಯದ ನೆರೆ
ಜನ ಹೋದರು ದೈವದ ಮೊರೆ
ಕಾಯುತ್ತಿಹರು ಮಳೆಯ ರುದ್ರನರ್ತನಕ್ಕೆ ತೆರೆ
ಜನಗಳಿಗಿದು ಗಾಯದ ಮೇಲೆ ಬರೆ
ಜನಜೀವನ ನೀರಲ್ಲಿ ನೆನೆ ನೆನೆ
ರೋಗ ರುಜಿನಗಳು ಮಾಡಿ ದವು ಮನೆ
ಸಿರಿ ಸಂಪತ್ತು ಕೊಚ್ಚಿಕೊಂಡು
ಹೋಗುತಿಹವು ಬಿರ್ರನೇ
ಪ್ರಕೃತಿ ಮಾತೆ ಎಂದು, ನಿನ್ನೀ ಕೋಪಕ್ಕೆ ಕೊನೆ
– ವಿಜಯಕುಮಾರ್ ಎಚ್.ಕೆ.