ಬಾ ಮಳೆಯೇ ಬಾ

ಬಾ ಮಳೆಯೇ ಬಾ ಇಳೆಗೆ
ಭೋರ್ಗರೆಯುತಾ
ಗುಡುಗುಡುಗಿ
ಮಿಂಚಾಗಿ
ತಂಪನೆರೆಯುತಾ
ಬಿರಿದಿಹುದು ಈ ಧರಣಿ
ನೋವಿಂದ ಒಳಗೊಳಗೆ
ಪ್ರಾರ್ಥಿಸಿರುವರು ಜನರೆಲ್ಲಾ
ಬರಲೆಂದು ನೀ ಕೆಳಗೆ
ನೀ ಬಂದರೆ ಪರಿಸರವೆಲ್ಲಾ ಹಸಿರು
ಹನಿಹನಿಯಲ್ಲೂ ಚೈತನ್ಯದ ಉಸಿರು
ನಿನ್ನ ಆಗಮನದಿ ಈ ನಿಸರ್ಗ
ಕಣ್ಮನ ತಣಿಸುವ ಹಸಿರ ಸ್ವರ್ಗ
ಬಿಡದೆ ಸುರಿಯುತಿರಲು ಇಳೆಗೆ ಮಳೆ
ಧರಣಿಯ ತುಂಬೆಲ್ಲಾ ಸಂತೋಷದ ಕಳೆ
ಜಗವೆಲ್ಲಾ ಆವರಿಸಿರಲು ವರುಣಧಾರೆ
ಭೂಮಿಯು ಕಂಗೊಳಿಸಿಹುದು ಉಟ್ಟಂತೆ
ಹಸಿರು ಸೀರೆ
ಬಾ ಮಳೆಯೇ ಬಾ ಇಳೆಗೆ
ಭೋರ್ಗರೆಯುತಾ
ಬಿಸಿಲ ಬೇಗೆಗೆ
ಬಳಲಿದ ಈ ಧರೆಗೆ
ತಂಪನೆರೆಯುತಾ
– ಜನಾರ್ದನ ಗೊರ್ಟೆ
ಭಟ್ಕಳ