ಯುಗಾದಿ

ಬಂದಿತು ನವಸಂವತ್ಸರವು
ತಂದಿತು ಹಸಿರ ಚಿಗುರಿನ ಚಿತ್ತಾರವು
ಕಣ್ಮನ ತಣಿಸುವ ವಾತಾವರಣವು
ಭೂರಮೆಗೆ ದೇವರು ಕೊಟ್ಟ ವರವು
ಎಲ್ಲೆಲ್ಲೊ ತುಂಬಿಹುದು ಚಿಗುರು
ಪ್ರಕೃತಿಯ ಮೈದುಂಬಿಕೊಂಡಿದೆ ಹಸಿರು
ನಿಸರ್ಗವು ಹೊಸ ಉಡುಪು ತೊಟ್ಟಂತೆ
ಶೃಂಗಾರದಲಿ ನನಗ್ಯಾರು ಸಮ ಅಂದಂತೆ
ಕಂಗೊಳಿಸಿಹುದು ನೋಡು
ವನದೇವಿಯ ಸೊಬಗು
ಮೇಳೈಸಿದೆ ಪ್ರಕೃತಿಯ
ಸೌಂದರ್ಯದ ಮೆರುಗು
ನಿಸರ್ಗವ ಕಂಡು ಹಕ್ಕಿಗಳ
ಚಿಲಿಪಿಲಿಯ ಸಂವಾದ
ಕಾಣದೆ ಮರೆಯಲಿ ಕುಳಿತು
ಕೋಗಿಲೆಯ ಇಂಪಾದ ನಾದ
– ಜನಾರ್ದನ ಗೊರ್ಟೆ