ನೀರಿಗೆ ಹಾಹಾಕಾರ

ನೀರಿಗೆ ಹಾಹಾಕಾರ

ನೀರಿನ ಕಹಳೆಯೇ ತುಂಬಾ ಜೋರು
ನೀರಿದ್ದಾಗ ತಿಳಿದಿರಲಿಲ್ಲ ಅದರ ಬೆಲೆಯು
ಇಲ್ಲದಿದ್ದಾಗ ಎಲ್ಲೆಲ್ಲು ಬರಿ ಜ್ವಾಲೆಯು

ಶತಮಾನಗಳ ಹಿಂದೆ ಬೇಸಿಗೆಯಲ್ಲಿ ಮಾತ್ರ ಇರಲಿಲ್ಲ ನೀರು
ಈಗ ಕಾಲಕಾಲಕ್ಕೂ ನೀರಿನ ಬರವೇ ಜೋರು
ಕಾರಣ ತಿಳಿಯದ ಜನರು ಕಟ್ಟುತಿಹರು ಮರದಂತಹ ಮನೆಯ
ಹಾಳುಮಾಡುತಿಹರು ಜೀವಸಂಕುಲದ ಮನೆಯಂತಹ ಪ್ರಕೃತಿಯ

ಮಳೆಗಾಲದಲ್ಲು ಸರಿಯಾಗಿ ಮಳೆಯಿಲ್ಲ
ಹಾಗೊಮ್ಮೆ ಹೀಗೊಮ್ಮೆ ಬರುವ ಮಳೆನೀರ ಶೇಕರಣೆಯಿಲ್ಲ
ಇರುವ ಜಲಾಶಯಗಳಲ್ಲಿ ನೀರಿಲ್ಲ
ನೀರಿಲ್ಲದೆ ಜೀವನವೇ ಇಲ್ಲ

ಕುಡಿಯಲೇ ನೀರಿರದ ಈ ಸಮಯದಲ್ಲಿ
ಬೆಳೆಯನ್ನು ಬೆಳೆಯುವುದೆಲ್ಲಿ
ಇಂದಿನ ನಮ್ಮ ನೀರಿನ ಶೇಕರಣೆ ಕುಗ್ಗಿದೆ
ಮಳೆಗಾಗಿಯೇ ಕಾಯಬೇಕಾಗಿದೆ

ಈಗ ಭೂಮಿಯ ಮೇಲೆ ಮಳೆ ಇದ್ದರೆ ಜೀವನ
ಇಲ್ಲವೆಂದರೆ ಎಲ್ಲರ ಜೀವ-ಮರಣ
ಇದಕ್ಕೆಲ್ಲಾ ಕಾರಣ
ಮಾನವನ ಆಸೆ ಎಂಬ ಬಾಣ

-ಧನರಾಜ್ ಎಂ.
WCG, ಬೆಂಗಳೂರು ಜಿಲ್ಲೆ

Spread the love
error: Content is protected.