ಕಾನನ

ನಿಸರ್ಗದೆಡೆಗೆ ಪಯಣ

ನೀವೂ ಕಾನನಕ್ಕೆ ಬರೆಯಬಹುದು

 

 ಕೆಲವು ವರ್ಷಗಳ ಹಿಂದೆ ನಾನು ಕೂಡ ಬಾವಲಿಗಳನ್ನು ಪಕ್ಷಿಗಳು ಎಂದು ತಿಳಿದಿದ್ದೆ. ತದನಂತರ ಬಾವಲಿಗಳು ಸಸ್ತನಿಗಳೆಂದು ತಿಳಿಯಿತು. ಭೂಮಿ ಮೇಲೆ ಹಾರುವಂತಹ ಸಸ್ತನಿ ಎಂದರೆ ಅವು ಬಾವಲಿಗಳು ಮಾತ್ರ. ಬಾವಲಿಗಳು ಸುಮಾರು 30 ವರ್ಷಗಳು ಜೀವಿಸಬಲ್ಲವು. ಬಾವಲಿಗಳು 1200 ಸೊಳ್ಳೆಗಳನ್ನು ಒಂದು ಗಂಟೆಯಲ್ಲಿ ತಿನ್ನಬಲ್ಲವು. ಬೀಜ ಪ್ರಸರಣ ಕ್ರಿಯೆಯಲ್ಲಿ ಬಾವಲಿಗಳೂ ಕೂಡ ಒಂದು ಮಾಧ್ಯಮ. ಬಾವಲಿಗಳು ಕೆಲವು ನೈಸರ್ಗಿಕ ಪರಭಕ್ಷಕಗಳನ್ನು ಹೊಂದಿವೆ. ಎಲ್ಲಾ ಬಾವಲಿಗಳು ಹೈಬರ್ನೇಟ್ ಆಗುವುದಿಲ್ಲ. ಪ್ರಪಂಚದಾದ್ಯಂತ 1,400 ಕ್ಕೂ ಹೆಚ್ಚು ಪ್ರಭೇದದ ಬಾವಲಿಗಳು ಇವೆ. ಏಪ್ರಿಲ್ 17 ರಂದು ಅಂತಾರಾಷ್ಟ್ರೀಯ ಬಾವಲಿ ದಿನವೆಂದು ಆಚರಿಸಲಾಗುತ್ತದೆ. ನಾವೆಲ್ಲರೂ ಬಾವಲಿಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸಲು ಕ್ರಮವನ್ನು ತೆಗೆದುಕೊಳ್ಳಬೇಕು

 ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. 

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.