ಕಾನನ

ನಿಸರ್ಗದೆಡೆಗೆ ಪಯಣ

ಕಣ್ಣು

ಹದ್ದಿನ ಕಣ್ಣು
ಹಾವಿನ ಮೇಲೆ
ಹಾವಿನ ಕಣ್ಣು
ಕಪ್ಪೆಯ ಮೇಲೆ
ಕಪ್ಪೆ ಕಣ್ಣು
ಚಿಟ್ಟೆಯ ಮೇಲೆ
ಚಿಟ್ಟೆಯ ಕಣ್ಣು
ಹೂವಿನ ಮೇಲೆ
ಹೂವಿನ ಕಣ್ಣು
ಕೇಸರದ ಮೇಲೆ
ಕೇಸರದ ಕಣ್ಣು
ಹೂವಿನ ದಳದೊಳಗೆ
ಹೂದಳದ ಕಣ್ಣು
ಬೀಜದೊಳಗೆ
ಬೀಜದ ಕಣ್ಣು
ಮರದೊಳಗೆ
ಮರದ ಕಣ್ಣು ಹಣ್ಣೊಳಗೆ
ಹಣ್ಣಿನ ಕಣ್ಣು ಚಿಲಿಪಿಲಿಯೊಳಗೆ
ಚಿಲಿಪಿಲಿಯಕಣ್ಣು
ತಮ್ಮ ಗೂಡೊಳಗೆ ಗೂಡು ಕಣ್ಣು
ಆನಂದದಡವಿಯೊಳಗೆ

ಕೃಷ್ಣನಾಯಕ್
ರಾಮನಗರ ಜಿಲ್ಲೆ

ಕಾನನದ ದನಿ ಹರಡಿ
error: Content is protected.