ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ಕಾನನ – ಅಕ್ಟೋಬರ್ – 2025

ಕಾನನ ಅಕ್ಟೋಬರ್ 2025 ರ ಸಂಚಿಕೆಯಲ್ಲಿ ಸೈಲೆಂಟ್ ಕಿಲ್ಲರ್ 'ಕಟ್ಟು ಹಾವು', 'ಬೇಲದ ಮರ'ದ ವೈಶಿಷ್ಟ್ಯಗಳು, ಹವಾಮಾನ ಬದಲಾವಣೆ ಮತ್ತು ಫಂಗೈ ಅಲರ್ಜಿ, ಪಕ್ಷಿಗಳ ವೈವಿಧ್ಯಮಯ ಪ್ರಕೃತಿ ಬಿಂಬ ಹಾಗೂ ಪರಿಸರ ಕಾಳಜಿಯ 'ನೆಲದನಿ' ಕವನದ ಪರಿಚಯವಿದೆ. ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ.
ಕಾನನ ಅಕ್ಟೋಬರ್ 2025 ಮಾಸಪತ್ರಿಕೆ ಮುಖಪುಟ - Kaanana Kannada Wildlife e-Magazine October 2025 Cover

PDF ಫೈಲ್ ಅನ್ನು ವೀಕ್ಷಿಸಲು/ಡೌನ್‌ಲೋಡ್ ಮಾಡಿಕೊಳ್ಳಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ :

ಕಾನನ ಅಕ್ಟೋಬರ್ 2025 ಸಂಚಿಕೆಯಲ್ಲಿರುವ ವಿಷಯಗಳು:

ಈ ತಿಂಗಳ ಸಂಚಿಕೆಯಲ್ಲಿ ಪ್ರಕೃತಿ, ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅನೇಕ ಆಸಕ್ತಿಕರ ಲೇಖನಗಳಿವೆ.

ಲೇಖನಗಳು:

  • ಸೈಲೆಂಟ್ ಕಿಲ್ಲರ್ – ರಾತ್ರಿ ವೇಳೆ ಮನೆಯಂಗಳದಲ್ಲಿ ಪ್ರತ್ಯಕ್ಷವಾದ ‘ಕಟ್ಟು ಹಾವು’ (ಕಾಮನ್ ಕ್ರೈಟ್) ರಕ್ಷಣೆ ಮಾಡಿದ ಅನುಭವದೊಂದಿಗೆ, ಅದರ ದೇಹ ಲಕ್ಷಣಗಳು, ವಿಷದ ಸ್ವರೂಪ (ನ್ಯೂರೋಟಾಕ್ಸಿಕ್) ಹಾಗೂ ಮಾನವ-ಹಾವುಗಳ ಸಹಬಾಳ್ವೆಯ ಕುರಿತ ವಿವರವಾದ ಲೇಖನ.
    ಲೇಖಕರು: ಮಂಜುನಾಥ್ ಅಮಲಗೊಂದಿ
  • ವನಸುಮ (ಬೇಲದ ಮರ) – ಕುರುಚಲು ಕಾಡುಗಳಲ್ಲಿ ಕಂಡುಬರುವ ಬೇಲದ ಮರದ ಬೆಳೆಯುವಿಕೆ, ಹಣ್ಣಿನ ಗುಣಲಕ್ಷಣಗಳು, ವನ್ಯಜೀವಿಗಳಿಗೆ (ಕರಡಿ, ಆನೆ, ಇತ್ಯಾದಿ) ಇದರ ಪ್ರಾಮುಖ್ಯತೆ ಹಾಗೂ ಆಯುರ್ವೇದದಲ್ಲಿ ಇದರ ಔಷಧೀಯ ಉಪಯೋಗಗಳ ಪರಿಚಯ.
    ಲೇಖಕರು: ಕೆ. ಪಿ. ಶಂಕರಪ್ಪ, ಶಾಂತಮ್ಮ ಎಸ್‌.
  • ವನಬಂಧ – 05 – ಕಾಡು, ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕನ್ನಡ ಪದಬಂಧ ಆಟ.
    ಲೇಖಕರು: ಅಕ್ಷತ ಹೆಚ್. ಕೆ.
  • ಫಂಗೈ ಎಸೆಯುತ್ತಿರುವ ಅಲರ್ಜಿ ಎಂಬ ಭರ್ಜಿ! (ವಿವಿ ಅಂಕಣ) – ಹವಾಮಾನ ಬದಲಾವಣೆಯಿಂದಾಗಿ ಶಿಲೀಂಧ್ರಗಳು (ಫಂಗೈ) ಮತ್ತು ಪರಾಗ ಕಣಗಳ (ಪೋಲನ್) ಅಲರ್ಜಿ ಅವಧಿಗಿಂತ ಮುಂಚಿತವಾಗಿಯೇ ಹೆಚ್ಚಾಗುತ್ತಿರುವ ಆತಂಕಕಾರಿ ಸಂಶೋಧನೆಯ ವಿಶ್ಲೇಷಣೆ.
    ಲೇಖಕರು: ಜೈಕುಮಾರ್ ಆರ್.
  • ನೆಲದನಿ (ಕವನ) – ಹಸಿರು, ಕಾಡು-ಮೇಡುಗಳು, ಜರಿ-ನದಿಯ ಚಂದ ಹಾಗೂ ನೆಲದ ಸಿರಿ ರಕ್ಷಣೆಯ ಸಂದೇಶ ಸಾರುವ ಸುಂದರ ಕವನ.
    ಲೇಖಕರು: ನಾಗರಾಜ ಬಿ. ನಾಯ್ಕ
  • ಪ್ರಕೃತಿ ಬಿಂಬ – ಗುಲಾಬಿ ಕೊರಳಿನ ಗಿಳಿ, ಬೆಳ್ಳಣ್ಣ, ನಾಮದ ಕೋಳಿ ಮತ್ತು ಬಿಳಿಹುಬ್ಬಿನ ಬೀಸಣಿಗೆ ನೊಣಹಿಡುಕ ಹಕ್ಕಿಗಳ ಪ್ರಭೇದ, ಜೀವಕ್ರಮ ಹಾಗೂ ವಾಸಸ್ಥಳದ ಸಂಪೂರ್ಣ ಮಾಹಿತಿ.
    ಲೇಖಕರು: ಭಗವತಿ ಬಿ. ಎಂ. & ದೀಪ್ತಿ ಎನ್.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *