ಕಾನನ

ನಿಸರ್ಗದೆಡೆಗೆ ಪಯಣ — 2011ರಿಂದ ಕನ್ನಡದಲ್ಲಿ ವನ್ಯವಿಜ್ಞಾನ, ಉಚಿತವಾಗಿ

ನೀವೂ ಕಾನನಕ್ಕೆ ಬರೆಯಬಹುದು

ಸಿಂಹವು ಕೇವಲ ಕಾಡಿನ ರಾಜ ಮಾತ್ರವಲ್ಲ, ಪರಿಸರ ಸಮತೋಲನವನ್ನು ಕಾಪಾಡುವ ಪ್ರಮುಖ ಪರಭಕ್ಷಕವೂ ಹೌದು. ವಿಶ್ವ ಸಿಂಹ ದಿನದ ಅಂಗವಾಗಿ ಏಷ್ಯಾಟಿಕ್ ಸಿಂಹಗಳ ಜೀವನ, ಅವುಗಳ ಸಾಮಾಜಿಕ ನಡವಳಿಕೆ ಮತ್ತು ಸಂರಕ್ಷಣೆಯ ಅಗತ್ಯವನ್ನು ಈ ಲೇಖನ ಪರಿಚಯಿಸುತ್ತದೆ.
ವಿರಮಿಸುತ್ತಿರುವ ಸಿಂಹಿಣಿ

  

          © ಮಧುಸೂದನ್ ಎಂ.

ತನ್ನ ಗಾಂಭೀರ್ಯ, ಶಕ್ತಿ ಮತ್ತು ಪ್ರಭಾವದಿಂದ ಸಿಂಹವನ್ನು “ಕಾಡಿನ ರಾಜ” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಜನರು ಸಿಂಹಗಳು ದಟ್ಟ ಅರಣ್ಯಗಳಲ್ಲಿ ವಾಸಿಸುತ್ತವೆ ಎಂದು ಭಾವಿಸಿದರೂ, ಅವು ಹೆಚ್ಚಾಗಿ ಹುಲ್ಲುಗಾವಲುಗಳು, ಕುರುಚಲು ಕಾಡುಗಳು ಹಾಗೂ ಕಲ್ಲುಬಂಡೆಗಳಿರುವ ಪ್ರದೇಶಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳ ಪ್ರಮುಖ ನೆಲೆ ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನ ಅರಣ್ಯವಾಗಿದೆ.

ಸಿಂಹಗಳು ಸಾಮಾಜಿಕ ಪ್ರಾಣಿಗಳಾಗಿದ್ದು, “ಪ್ರೈಡ್” ಎಂಬ ಗುಂಪುಗಳಲ್ಲಿ ವಾಸಿಸುತ್ತವೆ. ಒಂದು ಗುಂಪಿನಲ್ಲಿ ಹಲವಾರು ಹೆಣ್ಣು ಸಿಂಹಗಳು, ಅವುಗಳ ಮರಿಗಳು ಹಾಗೂ ಒಂದು ಅಥವಾ ಹೆಚ್ಚಿನ ಗಂಡು ಸಿಂಹಗಳು ಇರುತ್ತವೆ. ಬೇಟೆಯಾಡುವ ಜವಾಬ್ದಾರಿಯನ್ನು ಹೆಚ್ಚಾಗಿ ಸಿಂಹಿಣಿಯರೇ ನಿರ್ವಹಿಸುತ್ತವೆ. ಹಗಲಿನ ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲಿ ಕಳೆಯುವ ಇವುಗಳು, ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ಸಕ್ರಿಯವಾಗಿರುತ್ತವೆ. ಆಹಾರ ಸರಪಳಿಯ ಉನ್ನತ ಸ್ಥಾನದಲ್ಲಿರುವ ಸಿಂಹಗಳು ಅವು ವಾಸಿಸುವ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಆಗಸ್ಟ್ 10ರಂದು ಆಚರಿಸಲಾಗುವ “ವಿಶ್ವ ಸಿಂಹ ದಿನ” ವು ಈ ಅದ್ಭುತ ಜೀವಿಗಳ ಸಂರಕ್ಷಣೆಯ ಅಗತ್ಯವನ್ನು ನೆನಪಿಸುವ ಮಹತ್ವದ ದಿನವಾಗಿದೆ. ಕಾಡಿನ ರಾಜನ ಘರ್ಜನೆ ಮುಂದಿನ ಪೀಳಿಗೆಗಳಿಗೂ ಕೇಳಿಸಬೇಕಾದರೆ, ವನ್ಯಜೀವಿ ಸಂರಕ್ಷಣೆಯತ್ತ ನಮ್ಮ ಕಾಳಜಿ, ಜವಾಬ್ದಾರಿ ಮತ್ತು ಬದ್ಧತೆ ಇನ್ನಷ್ಟು ಹೆಚ್ಚಾಗಬೇಕು.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಸಂಚಿಕೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. 


ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com 

ಅಂಚೆ ವಿಳಾಸ:

ಅಡವಿ ಫೀಲ್ಡ್ ಸ್ಟೇಷನ್,
ಒಂಟೆಮಾರನ ದೊಡ್ಡಿ ಗ್ರಾಮ ,
ರಾಗಿಹಳ್ಳಿ ಅಂಚೆ,
ಜಿಗಣಿ ಹೋಬಳಿ,
ಆನೇಕಲ್ ತಾಲ್ಲೂಕು ,
ಬೆಂಗಳೂರು ನಗರ ಜಿಲ್ಲೆ
ಪಿನ್ ಕೋಡ್: 560083. ಗೆ ಕಳಿಸಿಕೊಡಬಹುದು.

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.