ಮಾಸ ವಿಶೇಷ – ನವಿಲಾಡಿ ಮರ

ಮಾಸ ವಿಶೇಷ – ನವಿಲಾಡಿ ಮರ

© ನಾಗೇಶ್ ಓ ಎಸ್, ನವಿಲಾಡಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Peacock Chaste Tree
ವೈಜ್ಞಾನಿಕ ಹೆಸರು : Vitex altissema

ನವಿಲಾಡಿ ಮರವು ಸಾಮಾನ್ಯವಾಗಿ ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುತ್ತದೆ. ಸುಮಾರು ಇಪ್ಪತ್ತರಿಂದ ಇಪ್ಪತೈದು ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರ ಒರಟಾದ ಬೂದು ಬಣ್ಣದ  ತೊಗಟೆಯನ್ನು ಹೊಂದಿದ್ದು, ಮರದ ಎಲೆಗಳು ತಿಳಿ ಹಸಿರು ಬಣ್ಣದಿಂದ ಕೂಡಿರುತ್ತದೆ. ಸುಮಾರು 6-18 ಸೆಂ.ಮೀ ಉದ್ದವಿರುವ ಎಲೆಯ ಕೊನೆ ಚೂಪಾಗಿರುತ್ತದೆ. ಹೂಗಳು ಗೊಂಚಲಿನಲ್ಲಿದ್ದು, ಬಿಳಿ ನೇರಳೆ ಮಿಶ್ರಿತ ಗುಲಾಬಿ ಬಣ್ಣದಿಂದ ಕೂಡಿರುತ್ತವೆ. ಈ ಮರದ ಹೂವುಗಳ ಮೊಗ್ಗು ಬಿಳಿ ಬಣ್ಣವಿದ್ದು, ಮೊಗ್ಗುಗಳ ಮೇಲೆ ಸಣ್ಣ ಸಣ್ಣ ಕೂದಲಿನಂತಹ ರಚನೆಯಿಂದ ತುಂಬಿರುತ್ತದೆ. ಹೂಗಳು ಸುವಾಸನೆ ಭರಿತವಾಗಿರುತ್ತವೆ. 6-8 ಮಿ.ಮೀ ಅಡ್ಡಳತೆಯ ನಯವಾದ ಮತ್ತು ನೇರಳೆ ಬಣ್ಣದ ಕಾಯಿಗಳನ್ನು ಬಿಡುತ್ತವೆ. ಈ ಕಾಯಿಗಳು ಹಣ್ಣಾದಾಗ ನೇರಳೆಯಿಂದ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಭಾರತೀಯ ಆಯುರ್ವೇದದಲ್ಲಿ ಈ ಮರದ ಭಾಗಗಳಾದ ಎಲೆ ಮತ್ತು ಬೇರುಗಳನ್ನು ಕೆಮ್ಮು, ಅಲರ್ಜಿ, ಗಾಯಗಳು ಮೊದಲಾದವುಗಳನ್ನ ಗುಣಪಡಿಸಲು ಔಷಧಕ್ಕಾಗಿ ಬಳಸುತ್ತಾರೆ.

Spread the love
error: Content is protected.