ನೀವೂ ಕಾನನಕ್ಕೆ ಬರೆಯಬಹುದು

ಸಕಲ ಜೀವರಾಶಿಗಳಿಗೂ ಇರುವುದೊಂದೇ ಭೂಮಿ. ಹಾಗೆಯೇ ಹಂಚಿಕೊಳ್ಳುವ ಬಾನು ಸಹ ಒಂದೇ. ಭೂಮಿ-ಬಾನು ಗಳ ನಡುವೆ ಇರುವ ಜೀವರಾಶಿಗಳು ಒಂದಕ್ಕೊಂದು ಕೊಂಡಿಗಳಂತೆ ಬೆಸೆದುಕೊಂಡಿವೆ. ಬಿಸಿಲು, ಮಳೆ, ಚಳಿ, ಗಾಳಿಗಳಿಗೆ ರಕ್ಷಣೆ ಪಡೆಯಲು ಪ್ರತೀ ಜೀವಿಯೂ ತನ್ನದೇ ಆದ ಕಲೆಯನ್ನು ಕರಗತ ಮಾಡಿಕೊಂಡಿದೆ. ಇಡೀ ಜಗತ್ತಿಗೆ ಶಕ್ತಿಯ ಮೂಲವಾದ ಸೂರ್ಯನು ಅಪರಿಮಿತವಾದ ಶಕ್ತಿಯನ್ನು ಅಡಗಿಸಿಕೊಂಡು, ಕೊಡುವ ಬೆಳಕಲ್ಲೇ ಚೈತನ್ಯ ಪಡೆದು ಬದುಕುವ ಜೀವಿಗಳಿಗೆ ಅವನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳು ಅಪಾಯವನ್ನುಂಟು ಮಾಡುವ ಶಕ್ತಿಯುಳ್ಳವಾಗಿವೆ. ಮೇಲ್ಮಟ್ಟದ ವಾತಾವರಣದಲ್ಲಿರುವ ಓಝೋನ್ (O3) ಪದರವು ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳು ಭೂಮಿಯ ಮೇಲ್ಮೈ ತಲುಪುವುದನ್ನು ತಡೆದು ಜೀವಿಗಳ ರಕ್ಷಣಾ ಕವಚದಂತೆ ಕೆಲಸ ಮಾಡುತ್ತಿದೆ. ಆದರೆ 1970 ರಲ್ಲಿ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಓಝೋನ್ ಪದರವು ಕ್ಷೀಣಿಸುತ್ತಿದೆ ಎಂಬ ಆಘಾತಕಾರಿ ವಿಚಾರವನ್ನು ತಿಳಿಸಿದ್ದಾರೆ.

ಓಝೋನ್ ಪದರ ಕ್ಷೀಣಿಸುವುದು ಒಂದು ಸ್ವಾಭಾವಿಕ ಕ್ರಿಯೆಯಾಗಿದ್ದರೂ, ಮಾನವನ  ಕೊಡುಗೆ ಅಪಾರವಾಗಿದೆ. ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು, ಶುಚಿ ಕಾರಕಗಳು, ಕೀಟನಾಶಕಗಳು ಹೀಗೆ ಅನೇಕ ರೀತಿಯ ಮಲಿನಕಾರಕಗಳ ಬಳಕೆಯಿಂದ  ಓಝೋನ್ ಪದರ ಕ್ಷೀಣಿಸುತ್ತಿದ್ದು ಚರ್ಮರೋಗಗಳು, ಜಲಚರಗಳಿಗೆ ಅಪಾಯ, ಸಸ್ಯಗಳ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಹೆಚ್ಚಿದೆ. ಇವೆಲ್ಲವನ್ನು ಅರಿತು ಪರಿಸರಸ್ನೇಹಿ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಲು, ಜನರಲ್ಲಿ ಜಾಗೃತಿ ಮೂಡಿಸಲು ಸೆಪ್ಟೆಂಬರ್ 16 ಅಂತರರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.. 

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.