ಮುಗಿಲು
ಮುಗಿಲ ಕಂಡ ಕಂದನು
ಕಣ್ಣರಳಿಸಿ ನಿಂತನು
ಬಳಿಗೆ ಬರಲು ಬೇಡಿಕೊಂಡನು
ತನ್ನ ಹಾಸಿಗೆಯಾಗು ಎಂದನು
ಮೃದುವಂತೆ ನಿನ್ನ ಮೈಯು
ಸವರಿದಂತೆ ಬೆಣ್ಣೆಯು
ಏನು ಹೊಳಪು, ಏನು ಬಿಳುಪು
ಎಂದು ಕೂಗಿಕೊಂಡನು
ಏನಿದೆಂತ ವಿಸ್ಮಯ
ಬಾನ ತುಂಬ ನಿನ್ನ ಮಾಯ
ನೋಡ ನೋಡುತ್ತಿದ್ದಂತೆ
ಓಡುವೆ, ಇಲ್ಲಾ ಕರಗುವೆ
ಅಲ್ಲಿ ಇಲ್ಲ ಅಲೆದು ತಂಪು ಮುಗಿಲೆ
ಯಾಕೆ ಸಣ್ಣಗಾಗುವೆ
ನನ್ನ ಜೊತೆಯಲಿ ಇದ್ದು ಬಿಡು
ನಾನು ತಣ್ಣಗಾಗುವೆ
– ಜನಾರ್ದನ ಎಂ. ಎನ್. ಗೊರ್ಟೆ
ಭಟ್ಕಳ, ಉತ್ತರ ಕನ್ನಡ ಜಿಲ್ಲೆ