ನೆರಳೊಂದು ಬೇಕು ಪ್ರತಿಜೀವಿಗೂ

ನೆರಳಿಗೇ ನೆರಳಾಗಬೇಕಿದೆ ಪ್ರತಿ ಮನುಜನೂ…
ಪ್ರಕೃತಿಯ ಒಡಲಲ್ಲಿವೆ
ಲಕ್ಷಾಂತರ ವೃಕ್ಷಗಳು
ಚಿವುಟದಿರಿ, ಉರುಳಿಸದಿರಿ
ಇದೇ ಪರಿಸರ ದಿನದ ಆಶಯಗಳು…
ತನ್ನಂತಾನೇ ಬೆಳೆಸಿದೆ ಪ್ರಕೃತಿ ನೂರಾರು ಗಿಡಮರಗಳನು
ಅವುಗಳನ್ನಾದರೂ ಉಳಿಸಿ ಬೆಳೆಸಬೇಕಿದೆ ನಾವುಗಳು
ಧರೆಯಲ್ಲಿ ನಿಜವಾದ ಸೌಂದರ್ಯವೆಂದಿದ್ದರೆ
ಅದು ಪ್ರಕೃತಿಯಲ್ಲಿ ಮಾತ್ರ.
ಆ ಸೌಂದರ್ಯವೇ ಗಿಡಮರಗಳಾಗಿರುವಾಗ ಅವನ್ನು ಉಳಿಸಲು ಪ್ರಯತ್ನ ನಮ್ಮದಾಗಬೇಕೀಗ…
ಹಸಿರೊಂದೆ ಬೇಕಂತೆ ಭೂತಾಯಿಗೆ…
ಮರಗಳನೆ ಸಾಕಬೇಕಂತೆ ಮುಂದಿನ ಪೀಳಿಗೆಗೆ.
ವನಜಾಕ್ಷಿ ಎಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಧನ್ಯವಾದಗಳು ಕಾನನ