ರೈತನ ಗೋಳಿನ ಗೀತೆ
ಉಳುತ್ತಾ-ಬಿತ್ತುತ್ತಾ, ಮುಗಿಲೆಡೆ
ನೋಡುತ್ತಾ
ನಿಂತರು ನಮ್ಮ ರೈತರು.
ಹಸಿವನು ನೀಗಿಸಿ ಬೆವರನು ಇಳಿಸಿ
ಶಷ್ಟದಿ ದುಡಿಯುವ ಮಹಾತ್ಮರು.
ನಿತ್ಯವು ಭೂಮಿ – ತಾಯಿಯ ಸೇವಕರು
ರೈತರ ಹೆಸರಲಿ ಅನ್ನಹುನುತಿಹರೂ ಎಲ್ಲರೂ
ಅವರನ್ನು ನೋಡದ ಈಗಿನ ಆಡಳಿತ ಗಾರರು
ಅವರ ಸ್ವಾರ್ಥದ ಆಡಳಿತಕ್ಕೆ ಬಲಿಯಾದ ಹುತಾತ್ಮರು
ನಿನ್ನನ್ನು ತುಳಿದು, ಎಲ್ಲಿಯೂ ಇರಲಾರರು
ಬದುಕುವುದಾದರೆ ಬದುಕಿ ರೈತರ ಶ್ರಮಕ್ಕಾಗಿ
ಎನ್ನತಿಹರು, ತಿಳಿದವರು… ತಿಳಿದು ನಡೆದವರು
ದಯವಿಟ್ಟು ಉಳಿಸಿ ಇವರೆ ನಮ್ಮ ಜನ್ಮದಾತರು.
– ಲಿಂಗರಾಜ ಎಮ್.
ಗದಗ ಜಿಲ್ಲೆ