ನಿಸರ್ಗ ಮಾತೆಗೆ ನಮನ

ನಿಸರ್ಗ ಮಾತೆಗೆ ನಮನ

ಹಚ್ಚಹಸಿರಿನಿಂದ ಕೂಡಿದ ನಿಸರ್ಗಮಾತೆ
ಎಲ್ಲರನ್ನು ಸಲುಹುತಿಹಳು ತನ್ನ ಮಕ್ಕಳಂತೆ

ಇವಳ ಸೇವೆಗೆ ಎಷ್ಟೆ ಧನ್ಯವಾದ ಹೇಳಿದರು ಕಡಿಮೆ
ಅವಳ ಅಭಿವೃದ್ಧಿಗೆ ಸದಾ ನಾವು ಮಾಡಬೇಕು ದುಡಿಮೆ

ಕಳ್ಳ-ದರೋಡೆಕಾರರು ಬಗೆಯುತಿಹರು ಮೋಸ
ಒಂದಲ್ಲ‌ ಒಂದು ದಿನ ಖಾಯಂ ಅವರಿಗೆ ಜೈಲುವಾಸ

ಅರಣ್ಯ ರಕ್ಷಣೆಗೆ ಸದಾ ಸಿದ್ಧ ನಮ್ಮ ಹಸಿರು ಯೋಧರು
ಅವರ ಬಲಿಧಾನ, ನಮ್ಮ ಪ್ರಕೃತಿ ಸೇವೆಗೆ ಸದಾ ಉಸಿರು

ಸದಾ ಹಚ್ಚಹಸಿರಿನಿಂದ ಕೂಡಿರಲಿ ನನ್ನ ಅರಣ್ಯ ದೇವತೆ
ಇದು ನಾನು ಬರೆದ ಕಾನನಕ್ಕೆ ಮನದಾಳದ ಕವಿತೆ

            – ಲಿಂಗರಾಜ ಎಮ್.
                            ಗದಗ ಜಿಲ್ಲೆ


Spread the love
error: Content is protected.