ಗುಲಾಬಿ

ನಾ ಬರೀ ಚಿತ್ರವಲ್ಲ ಅಣ್ಣ
ನೋಡು ಇರುವ ರಕ್ತ ಕೆಂಪು
ಎಳೆಎಳೆಯಾಗಿ
ಪದರದಿ
ಪದಜಾರಿಸುವ
ಸಮ್ಮೋಹಿತ ಕುಸುಮನಾ
ನಾ ಬರೀ ಚಿತ್ತಾರವಲ್ಲ ಅಣ್ಣ
ಪ್ರಿಯ ಪ್ರಿಯೆಯರ
ಆಲಿಂಗನಾದೂತನಾ
ಮಜ್ಜನಾದಿ ಪೂಸಿಕೊಳುವ
ಅತ್ತರಿನ ಧಾತುನಾ
ನಾ ಬರೀ ಚಿತ್ರವಲ್ಲ ಅಣ್ಣ
ಔಷಧದೊಳಗೂ ನುಸಿಳಿಹ
ಮುಳ್ಳು ರಾಣಿನಾ
ನವಾಬಲಾಲರ
ಲಾಲನೆಯೊಳು ಬೆಳೆದ
ಗುಲಾಬಿ ನಾನು
ಒಳಗಣ್ಣೊಳು ಕಾಣು
ನಾ ಬರೀ ಚಿತ್ರವಲ್ಲ ಅಣ್ಣ
– ಡಾ.ದೀಪಕ್ ಭ
ಮೈಸೂರು ಜಿಲ್ಲೆ

ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ