ಮಾಸ ವಿಶೇಷ – ಕರಿ ಗರಕಲೆ

ಮಾಸ ವಿಶೇಷ – ಕರಿ ಗರಕಲೆ

©ನಾಗೇಶ್ ಓ ಎಸ್, ಕರಿ ಗರಕಲೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Donkey berry, Sandpaper raisin
ವೈಜ್ಞಾನಿಕ ಹೆಸರು : Grewia flavescens

ಕರಿ ಗರಕೆಲೆ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಗಿಡ. ಸುಮಾರು ನಾಲ್ಕರಿಂದ ಐದು ಮೀಟರ್ ಎತ್ತರಕ್ಕೆ ಬೆಳೆಯುವ ಹಲವು ಕಾಂಡಗಳನ್ನೊಳಗೊಂಡ ಕುರುಚಲು ಗಿಡವಾಗಿದೆ. ಕಾಂಡವು ಕಂದು ಹಾಗು ಬೂದು ಮಿಶ್ರಿತ ಬಣ್ಣದಲ್ಲಿರುತ್ತದೆ. ಎಲೆಗಳು ತಿಳಿ ಹಸಿರು ಬಣ್ಣದಲ್ಲಿದ್ದು ಸುಮಾರು ಆರರಿಂದ ಹತ್ತು ಸೆಂ.ಮೀ ಉದ್ದ ಹಾಗು 2.5 ರಿಂದ 3.5 ಸೆಂ.ಮೀ ಅಗಲವಿದ್ದು ಎಲೆಯ ಕೊನೆ ಚೂಪಾಗಿರುತ್ತದೆ. ವರ್ಷದ ಜುಲೈ- ಆಗಸ್ಟ್ ತಿಂಗಳಲ್ಲಿ  ಹೊಳೆಯುವ ಹಳದಿ ಬಣ್ಣದ ಹೂಗಳನ್ನು ಬಿಡುವ ಈ ಗಿಡದ ಹೂ ಸುಮಾರು 1.5 ಸೆಂ.ಮೀ ಇಂದ 2 ಸೆಂ.ಮೀ ಉದ್ದವಿದ್ದು, ಮೂರು ಮೂರು ಹೂಗಳು  ಗೊಂಚಲಿನಂತೆ ಇರುತ್ತವೆ. ಈ ಗಿಡದ ಕಾಯಿಗಳು ಹಣ್ಣಾದಾಗ ಗಟ್ಟಿಯಾಗಿದ್ದು ಕಂದು ಬಣ್ಣದಲ್ಲಿರುತ್ತವೆ. ಪ್ರತೀ ಹಣ್ಣಿನಲ್ಲೂ ಒಂದು ಅಥವಾ ಎರಡು ಬೀಜಗಳಿರುತ್ತವೆ.  ಈ ಹಣ್ಣಿನಲ್ಲಿ ಅತಿಯಾದ ಕಬ್ಬಿಣದ ಅಂಶವಿರುವುದರಿಂದ ಸಾಂಪ್ರದಾಯಿಕ ಅಯುರ್ವೇದದಲ್ಲಿ ರಕ್ತ ಹೀನತೆ ಗುಣಪಡಿಸಲು ಈ ಕಾಯಿಗಳನ್ನು  ಬಳಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಈ ಗಿಡದ ರೆಂಬೆಗಳಿಂದ ಬುಟ್ಟಿಗಳನ್ನು ಹೆಣೆಯಲು ಸಹ ಬಳಸುತ್ತಾರೆ. 

Spread the love
error: Content is protected.