ಮೂಕ ಪ್ರಾಣಿಗಳು ಅದು ಎಷ್ಟೋ ವಾಸಿ
ಮರಗಿಡಗಳನು ಧರೆಗುರುಳಿಸಿ
ಹಸಿರು ಕಾಡನು ಅಳಿಸಿ
ಕಾಂಕ್ರೀಟ್ ಕಾಡನು ಬೆಳೆಸಿ
ಭೂಮಿಯ ತಾಪಮಾನ ಹೆಚ್ಚಿಸಿ
ಬಳಿಯುತಿಹನು ಪರಿಸರಕ್ಕೆ ಮಸಿ
ದುರುಳ ಮನುಜ ಸಂಭ್ರಮ
ಆಚರಸಿ ಕುಣಿದು ಕುಪ್ಪಳಿಸಿ!
ಕೈಗಾರಿಕೆ ನಿರ್ಮಿಸಿ ಬೆಳಸಿ
ಅವುಗಳಿಂದ ವಿಷ ಅನಿಲಗಳು
ಹೊರ ಸೂಸಿ ಎಲ್ಲೆಡೆ ಹರಡಿಸಿ
ವಾಯು ಪ್ರದೂಷಣೆಗೊಳಿಸಿ
ಬಳಿಯುತಿಹನು ಪರಿಸರಕ್ಕೆ ಮಸಿ
ದುರುಳ ಮನುಜ ಸಂಭ್ರಮ
ಆಚರಸಿ ಕುಣಿದು ಕುಪ್ಪಳಿಸಿ!
ರಾಸಾಯನಿಕಗಳ ಬಳಿಸಿ
ಸರೋವರ ನದಿಗಳಿಗೂ ಬೆರೆಸಿ
ಜೀವಜಲ ಮಲಿನಗೊಳಿಸಿ
ಜಲಚರಗಳನ್ನು ಸಾಯಿಸಿ
ಬಳಿಯುತಿಹನು ಪರಿಸರಕ್ಕೆ ಮಸಿ
ದುರುಳ ಮನುಜ ಸಂಭ್ರಮ
ಆಚರಸಿ ಕುಣಿದು ಕುಪ್ಪಳಿಸಿ!
ತ್ಯಾಜ್ಯ ಪ್ಲಾಸ್ಟಿಕ್ ಗಳನ್ನು
ಹೆಚ್ಚು ಹೆಚ್ಚು ಉತ್ಪಾದಿಸಿ
ಮನಬಂದಂತೆ ಉಪಯೋಗಿಸಿ
ಮಣ್ಣಿನ ನೈರ್ಮಲ್ಯ ಕುಂದಿಸಿ
ಬಳಿಯುತಿಹನು ಪರಿಸರಕ್ಕೆ ಮಸಿ
ದುರುಳ ಮನುಜ ಸಂಭ್ರಮ
ಆಚರಿಸಿ ಕುಣಿದು ಕುಪ್ಪಳಿಸಿ!
ಕಾಡನು ಉಳಿಸುವ ನಾಡನು ಬೆಳಸುವ
ಎಂದು ನುಡಿಯುತಲೆ ಬಣ್ಣ ಬಣ್ಣದ ಹುಸಿ
ವಿಶ್ವ ಪರಿಸರ ದಿನ ನೆಪ ಮಾತ್ರಕೆ ನಡೆಸಿ
ಬಳಿಯುತಿಹನು ಪರಿಸರಕ್ಕೆ ಮಸಿ
ದುರುಳ ಮನುಜ ಸಂಭ್ರಮ
ಆಚರಿಸಿ ಕುಣಿದು ಕುಪ್ಪಳಿಸಿ
ಇವನ ಮುಂದೆ ಮೂಕ ಪ್ರಾಣಿಗಳು
ಅದು ಎಷ್ಟೋ ವಾಸಿ ಅದು ಎಷ್ಟೋ ವಾಸಿ !
– ವಿಜಯ್ ಕುಮಾರ್ ಎಚ್. ಕೆ.
ರಾಯಚೂರು ಜಿಲ್ಲೆ