ಮಾಸ ವಿಶೇಷ – ಕಾಡುನೆಲ್ಲಿ
© ನಾಗೇಶ್ ಓ ಎಸ್, ಕಾಡುನೆಲ್ಲಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : INDIAN GOOSEBERRY
ವೈಜ್ಞಾನಿಕ ಹೆಸರು : Phyllathus emblica
ಕಾಡುನೆಲ್ಲಿ ಭಾರತದ ಬಹುತೇಕ ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತದೆ. ಸಾಮಾನ್ಯ ಎಂಟರಿಂದ ಹತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಗ್ರೀಕ್ ಭಾಷೆಯಲ್ಲಿ Phyllathus ಎಂದರೆ ಎಲೆ ಮತ್ತು ಹೂ ಎಂದು ಅರ್ಥ, ಅಂತೆಯೇ ಸರಳವಾದ ಎಲೆಗಳನ್ನ ಹೊಂದಿದ್ದು. ರೆಂಬೆಗಳ ಉದ್ದಗಲಕ್ಕೂ ಬೆಳೆದಿರುತ್ತವೆ. ಎಲೆಗಳ ಮಧ್ಯೆ ಹಸಿರುಹಳದಿ ಬಣ್ಣದ ಹೂಗಳಿದ್ದು, ಒಂದೇ ಹೂ ಗೊಂಚಲಿನಲ್ಲಿ ಗಂಡು ಮತ್ತು ಹೆಣ್ಣು ಹೂಗಳನ್ನು ಹೊಂದಿರುತ್ತವೆ. ಹಣ್ಣುಗಳು ಗೋಲಾಕಾರದಲ್ಲಿದ್ದು ತಿಳಿಹಸಿರು ಮಿಶ್ರ ಹಳದಿ ಬಣ್ಣದಲ್ಲಿದ್ದು ಗಟ್ಟಿಯಾಗಿರುತ್ತವೆ. ಕಹಿ ಹಾಗೂ ಹುಳಿಯಾಗಿರುವ ಈ ಹಣ್ಣುಗಳು ಆನೆ, ಜಿಂಕೆ, ಕಾಡುಕುರಿ, ಕೋತಿಗಳು ಮೊದಲಾದ ಪ್ರಾಣಿಗಳಿಗೆ ಪ್ರಿಯವಾದವು. ‘ಸಿ’ ಅನ್ನಾಂಗ ಹೊಂದಿರುವ ಇವು ಬಹಳ ಜನಪ್ರಿಯ ಅದಲ್ಲದೆ ಈ ಹಣ್ಣುಗಳನ್ನ ಆಯುರ್ವೇದ ಔಷಧಿ ತಯಾರಿಕೆಯಲ್ಲೂ ಬಳಸುತ್ತಾರೆ.