ರೌದ್ರನರ್ತನ
ಮಳೆಯೇ ನಿಲ್ಲಲಿ ನಿನ್ನ ರೌದ್ರನರ್ತನ
ತಲ್ಲಣಿಸಿಹುದು ಭೂಮಿಯು
ಯಾಕೆ ನಿನಗಿಷ್ಟು ಕೋಪ ತಾಪ
ಸಹಿಸಿಕೊಳ್ಳಲಾರರು ಮನುಜರು
ಎಲ್ಲಿ ನೋಡಿದರೂ ನಿನ್ನದೇ ಅಬ್ಬರ
ಯಾಕೆ ನೀನಾದೆ ಇಷ್ಟೊಂದು ಕ್ರೂರ
ಎಲ್ಲೆಡೆ ಕೇಳುತಿಹುದು ಜನರ ಹಾಹಾಕಾರ
ಕಣ್ಣಾಲೆಗಳಲಿ ತುಂಬಿಹುದು ದುಃಖದ ಕಣ್ಣೀರ
ಜೀವಜಲವು ನೀನು
ಜೀವ ಕೊಲ್ಲುವ ರಕ್ಕಸನಾದರೆ ಹೇಗೆ?
ಕಂಗೆಟ್ಟ ಮನುಜನು
ತಿಳಿಯದಾದನು ನಿನ್ನಿಂದ ತಪ್ಪಿಸಿಕೊಳ್ಳುವ ಬಗೆ!
ವರುಣ ದೇವನೆ ಶಾಂತನಾಗು
ನಿನ್ನನೆ ಅವಲಂಬಿಸಿದ ಈ ಜಗಕೆ
ನಿಧಾನಿಸಿ ಧರೆಗೆ ಆಗಮಿಸು
ನಿನ್ನನೆ ದೇವರೆಂದು ಪೂಜಿಸುವ ಜನಕೆ
-ಜನಾರ್ಧನ ಗೊರ್ಟೆ.