ಮಾಸ ವಿಶೇಷ – ಸೀಮೆತಂಗಾಡಿ

©© ಧನರಾಜ್ ಎಮ್, ಸೀಮೆತಂಗಾಡಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ವೈಜ್ಞಾನಿಕ ಹೆಸರು : Spectacular cassia
ಇಂಗ್ಲೀಷ್ ಹೆಸರು : Golden shower

ಸೀಮೆತಂಗಾಡಿ ಮರವು (spectacular cassia) ಒಂದು ಅಮೆರಿಕ ಮೂಲದ ಮರ. ಇದು ಬಹಳ ದಟ್ಟವಾಗಿ ಹರಡುವ ಮರವಾಗಿದ್ದು 11 ರಿಂದ 18 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಸಂಯುಕ್ತ ಎಲೆಗಳನ್ನು ಹೊಂದಿರುವ ಈ ಮರ ನಿತ್ಯಹರಿದ್ವರ್ಣ ಕಾಡುಗಳಲ್ಲಿ ವರ್ಷಪೂರ್ತಿ ಹಸಿರಿನಿಂದ ಕೂಡಿರುತ್ತದೆ. ಇದು ಬೆಳೆದು ಹೆಮ್ಮರವಾದಾಗ ಸುಮಾರು 30 ಸೆ.ಮೀ ಕಾಂಡದ ವ್ಯಾಸವನ್ನು ಹೊಂದಿರುತ್ತದೆ. ಎಲೆಗಳು ಕೊಂಬೆಗಳೊಂದಿಗೆ ವ್ಯಾಪಕವಾಗಿ ಹರಡುತ್ತಾ ಹೋಗುತ್ತವೆ. ದೂರದಿಂದ ಈ ಮರವು ಹಳದಿ ಕಿರೀಟ ತೊಟ್ಟಿರುವಂತೆ ಕಾಣುತ್ತದೆ, ಅದಕ್ಕೆ ಕಾರಣ ಇದರ ಹೂಗಳೆಂದರೆ ತಪ್ಪಾಗದು. ಗಟ್ಟಿಯಾದ ಬೀಜಗಳು ಮೊಳಕೆಯೊಡೆಯಲು 15 ರಿಂದ 30 ದಿನಗಳ ಕಾಲ ತೆಗೆದುಕೊಳ್ಳುತ್ತವೆ, ಮೊಳಕೆಯೊಡೆದ ಬೀಜಗಳು 4 ರಿಂದ 6 ಸೆ.ಮೀ ಎತ್ತರಕ್ಕೆ ಬೆಳೆಯುತ್ತಿದ್ದಂತೆ ಗಿಡಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಿ 6 ತಿಂಗಳ ನಂತರ ನೆಡಬೇಕು.

ಸೀಮೆತಂಗಾಡಿಮರವು ಸುಂದರವಾಗಿ ಕಾಣುವುದರ ಜೊತೆಗೆ ಕೆಲವು ಔಷಧಿ ಗುಣವನ್ನು ಸಹ ಹೊಂದಿದೆ. ತನ್ನ ಎಲೆಯ ಸಾರದಿಂದ ಚರ್ಮರೋಗ ಹಾಗೂ ಅಲರ್ಜಿಯಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ನಾವು ತಿನ್ನುವ ಆಹಾರದ ಮೂಲಕ ದೇಹ ಸೇರುವ Bacillus ceus ಎಂಬ ಬ್ಯಾಕ್ಟೀರಿಯಾವನ್ನು ತೊಲಗಿಸಬಹುದು. ಹೆಚ್ಚು ತೂಕವಿಲ್ಲದ್ದ ಹಾಗೂ ಗೆದ್ದಲು ಹಿಡಿಯದ ಮರವಾದುದರಿಂದ ಸಣ್ಣ ಪುಟ್ಟ ಉಪಕರಣಗಳನ್ನು ಮಾಡಲು ಹಾಗೂ ಇದ್ದಲು ತಯಾರಿಸಲು ಇದನ್ನು ಬಳಸಲಾಗುತ್ತದೆ.

Spread the love
error: Content is protected.